ಟೊಮೆಟೊ ರೈಸ್ ಮಾಡುವ ವಿಧಾನ

08/11/2021

ಬೇಕಾಗುವ ಪದಾರ್ಥಗಳು :  ಎಣ್ಣೆ-4-5 ಚಮಚ, ಚಕ್ಕೆ- 2, ಲವಂಗ-4, ಏಲಕ್ಕಿ-2, ಪಲಾವ್ ಎಲೆ- 2-3, ತುಪ್ಪ-ಅಗತ್ಯಕ್ಕೆ ತಕ್ಕಷ್ಟು,  ಈರುಳ್ಳಿ-1, ಪುದೀನಾ-ಅಗತ್ಯಕ್ಕೆ ತಕ್ಕಷ್ಟು,  ಉಪ್ಪು-ರುಚಿಗೆ ತಕ್ಕಷ್ಟು,  ಟೊಮೆಟೋ- 2-3,
ಬಟಾಣಿ- ಒಂದು ಸಣ್ಣ ಬಟ್ಟಲು,  ಖಾರದ ಪುಡಿ- 1 ಚಮಚ, ಅರಿಶಿನದ ಪುಡಿ- ಸ್ವಲ್ಪ, ಗರಂ ಮಸಾಲಾ- ಅರ್ಧ ಚಮಚ,  ಅಕ್ಕಿ- 1 ಬಟ್ಟಲು, ನೀರು

ಮಾಡುವ ವಿಧಾನ :  ಮೊದಲು ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ, ತುಪ್ಪ ಹಾಕಿ ಕಾಯಲು ಬಿಡಿ.
ನಂತರ ಇದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಈರುಳ್ಳಿ, ಬಟಾಣಿ, ಟೊಮೆಟೋ, ಪುದೀನಾ ಹಾಕಿ ಕೆಂಪಗೆ ಹುರಿದುಕೊಳ್ಳಿ.
ಕೆಂಪಗಾದ ಬಳಿಕ ಉಪ್ಪು, ಖಾರದ ಪುಡಿ, ಅರಿಶಿಣದ ಪುಡಿಸ, ಗರಂ ಮಸಾಲಾ, ಅಕ್ಕಿ ಹಾಗೂ ಅಳತೆ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮೂರು ಕೂಗು ಕೂಗಿಸಿಕೊಂಡರೆ ರುಚಿಕರವಾದ ಟೊಮೆಟೋ ರೈಸ್ ಸವಿಯಲು ಸಿದ್ಧ.