ಮಡಿಕೇರಿ ಕೋಟೆಯಲ್ಲಿ ಪುತ್ತರಿ ಕೋಲಾಟ

21/11/2021

ಮಡಿಕೇರಿ ನ.21 : ನಗರದ ಕೋಟೆ ಆವರಣದಲ್ಲಿ ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಆಶ್ರಯದಲ್ಲಿ ಪಾಂಡೀರ ಕುಟುಂಬಸ್ಥರಿoದ ಹುತ್ತರಿ ಕೋಲಾಟವನ್ನು ಆಯೋಜಿಸಲಾಗಿತ್ತು.
ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.
ಪಾಂಡೀರ ಕುಟುಂಬದ ಸದಸ್ಯರು ಹಾಗೂ ಮಡಿಕೇರಿ ಕೊಡವ ಸಮಾಜದ ಸದಸ್ಯರು ದುಡಿಕೊಟ್ಟ್ ಪಾಟ್‌ನ ತಾಳಕ್ಕೆ ಹೆಜ್ಜೆ ಹಾಕುತ್ತಾ ಹುತ್ತರಿ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್ ಸೇರಿದಂತೆ ಮತ್ತಿತ್ತರ ಕೊಡವ ಸಾಂಪ್ರದಾಯಿಕ ನೃತ್ಯ ಪ್ರಾಕಾರಗಳನ್ನು ಪ್ರದರ್ಶಿಸಿದರು. ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಪ್ರಮುಖರಾದ ರಮೇಶ್ ಹೊಳ್ಳ, ಕೊಡವ ಸಾಹಿತ್ಯ ಅಕಾಡೆಮಿ ಮಾಜೀ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ ಮತ್ತಿತ್ತರರು ಹಾಜರಿದ್ದರು.