ಮಾಕುಟ್ಟ ಪ್ರಕರಣ : ಕೋಳಿ ಗೊಬ್ಬರದೊಂದಿಗೆ ಬೀಟೆ ಮರ ಸಾಗಾಟ : ಆರೋಪಿ ಬಂಧನ

22/11/2021

ಮಡಿಕೇರಿ ನ.22 : ಕೋಳಿ ಗೊಬ್ಬರದ ಚೀಲಗಳ ಕೆಳಗೆ ಬೀಟೆ ಮರದ ಸೈಜುಗಳನ್ನು ತುಂಬಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಾಕುಟ್ಟ ಅರಣ್ಯ ತನಿಖಾ ಠಾಣೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಸೇಬಿಲ್ ಟಿ.ಎನ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಬೀಟೆ ಮರದ 7 ಸೈಜುಗಳೊಂದಿಗೆ ಬೊಲೆರೊ ಪಿಕ್ ಅಪ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಮಾಕುಟ್ಟ ಅರಣ್ಯ ತನಿಖಾ ಠಾಣೆಯ ಮೂಲಕ ತೆರಳುತ್ತಿದ್ದ ಕೇರಳ ಮೂಲದ ಬೊಲೆರೊ ಪಿಕ್ ಅಪ್ ವಾಹನದಲ್ಲಿ ಬೀಟೆ ಪತ್ತೆಯಾಗಿದೆ.
ವಿರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಶಿನಿ ಎ.ಜೆ. ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸುಹಾನ ಹರೀಶ್ ಅತ್ತಾವರ, ತನಿಖಾ ಠಾಣೆಯ ಉಪವಲಯ ಅರಣ್ಯಾಧಿಕಾರಿ ಮಹಮ್ಮದ್ ಹನೀಪ್, ಮಾಕುಟ್ಟ ಶಾಖೆಯ ಉಪವಲಯ ಅರಣ್ಯಾಧಿಕಾರಿ ಚಂದ್ರಶೇಖರ ಮಹಾದೇವ ಹುರಳಿ, ಹಂಗಾಮಿ ಅರಣ್ಯ ವೀಕ್ಷಕರುಗಳಾದ ಸಜೀ ಜೆಕಬ್, ಕೆ.ಆರ್.ರಮೇಶ್, ರಂಜು ಹಾಗೂ ಹಮೀದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.