ಹುಂಡಿಯಲ್ಲಿ ಜಿಲ್ಲಾ ಮಟ್ಟದ ಪ್ರತಿಭೋತ್ಸವ ಸಮಾರೋಪ : ಮಡಿಕೇರಿ ವಿಭಾಗಕ್ಕೆ ಪ್ರಶಸ್ತಿ

22/11/2021

ಮಡಿಕೇರಿ ನ.22 : ಧಾರ್ಮಿಕ ಹಾಗೂ ಸಾಮಾಜಿಕ ವಿಚಾರಗಳಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಸಮಾಜದ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಎಸ್ ಎಸ್ ಎಫ್ ರಾಜ್ಯ ಸಮಿತಿಯು ವಿವಿಧ ಘಟಕಗಳಲ್ಲಿ ಎರಡು ವರ್ಷಕ್ಕೊಮ್ಮೆ ಆಯೋಜಿಸುವ ಪ್ರತಿಭೋತ್ಸವದ ಕೊಡಗು ಜಿಲ್ಲಾ ಮಟ್ಟದ ಕಾರ್ಯಕ್ರಮ ಹುಂಡಿಯಲ್ಲಿ ಸಮಾರೋಪಗೊಂಡಿತು.
ಮರ್ಕಝ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಹುಂಡಿ ಜಮಾತ್ ಅಧ್ಯಕ್ಷ ಸಿ.ಮುಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಮರ್ಕಝ್ ಪಬ್ಲಿಕ್ ಸ್ಕೂಲ್ ವ್ಯವಸ್ಥಾಪಕ ಹಂಝ ಅನ್ವರಿ ಪ್ರತಿಭೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು. ರಾತ್ರಿ ರಾಶಿದ್ ಬುಖಾರಿ ಹಾಗೂ ಇಲ್ಯಾಸ್ ಅಲ್ ಹೈದ್ರೂಸಿ ತಂಙ್ಞಳ್ ಎಮ್ಮೆಮಾಡು ಅವರ ನೇತೃತ್ವದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು.
ವಿವಿಧ ಸ್ಪರ್ಧೆಗಳಲ್ಲಿ 250 ಕ್ಕೂ ಅಧಿಕ ಪ್ರತಿಭೆಗಳು ಪಾಲ್ಗೊಂಡಿದ್ದರು.
ಎಸ್‌ಎಸ್‌ಎಫ್ ನ ಜಿಲ್ಲಾಧ್ಯಕ್ಷ ಶಾಫಿ ಸಅದಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಜಂಇಯ್ಯತ್ತುಲ್ ಉಲಮಾ ಒಕ್ಕೂಟದ ಜಿಲ್ಲಾಧ್ಯಕ್ಷ ಸೈಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ ತಂಙ್ಞಳ್ ಎಮ್ಮೆಮಾಡು ಪ್ರಾರ್ಥಿಸಿ, ಕೊಡಗು ಜಿಲ್ಲಾ ನಾಇಬ್ ಖಾಝಿ ಉದ್ಘಾಟಿಸಿದರು.
ಸಾಮಾಜಿಕ ಮುಖಂಡ ವಿ.ಪಿ.ಶಶಿಧರ್, ಯುವ ಸಾಹಿತಿ ನೌಷಾದ್ ಜನ್ನತ್ ಹಾಗೂ ಮಾಧ್ಯಮ ವರದಿಗಾರ ರಂಜಿತ್ ಕವಲಪುರ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಅಶ್ರಫ್ ಅಹ್ಸನಿ ಉಸ್ತಾದ್ ಹಫೀಳ್ ಸಅದಿ ಕೊಳಕೇರಿ, ಇಸ್ಮಾಯಿಲ್ ಸಖಾಫಿ ಕೊಂಡoಗೇರಿ, ಕೆಸಿಎಫ್ ನ ಜಲೀಲ್ ನಿಝಾಮಿ, ಕೆಎಂಜೆಯ ಮುಹಮ್ಮದ್ ಹಾಜಿ ಕುಂಜಿಲ, ಲತೀಫ್ ಸುಂಟಿಕೊಪ್ಪ, ವಕೀಲ ಕುಞ ಅಬ್ದುಲ್ಲಾ, ಹಮೀದ್ ಕಬಡಕೇರಿ, ನೌಷಾದ್ ಝುಹ್ರಿ, ಮಾಲ್ದಾರೆ ಗ್ರಾ.ಪಂ ಅಧ್ಯಕ್ಷ ಶಮೀರ್, KSWAಮುಖಂಡ ಬಶೀರ್ ಉಪಸ್ಥಿತರಿದ್ದರು.
ಪ್ರತಿಭೋತ್ಸವದ ಚಾಂಪಿಯನ್ ಟ್ರೋಫಿಯನ್ನು ಮಡಿಕೇರಿ ಡಿವಿಷನ್ ತನ್ನದಾಗಿಸಿಕೊಂಡಿತು. ವಿರಾಜಪೇಟೆ ಹಾಗೂ ಸೋಮವಾರಪೇಟೆ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಗಳಿಸಿದರು.
ರಾಜ್ಯ ಮಟ್ಟದ ಪ್ರತಿಭೋತ್ಸವ ಕಾರ್ಯಕ್ರಮವು ನ.26, 27, 28ರಂದು ದಕ್ಷಿಣ ಕನ್ನಡ ಜಿಲ್ಲೆಯ ಕೃಷ್ಣಾಪುರದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಾರ್ಯದರ್ಶಿ ಮುಜೀಬ್ ಕೊಂಡoಗೇರಿ ತಿಳಿಸಿದ್ದಾರೆ.