ಕಾಂಗ್ರೆಸ್ ತಾಯಿ ಇದ್ದ ಹಾಗೆ : ಎಂಎಲ್‌ಸಿ ವೀಣಾಅಚ್ಚಯ್ಯ

23/11/2021

ಮಡಿಕೇರಿ ನ.23 : ಕಾಂಗ್ರೆಸ್ ಪಕ್ಷ ತಾಯಿ ಇದ್ದಂತೆ, ತಾಯಿಗೆ ಯಾರೂ ದ್ರೋಹ ಮಾಡಬಾರದು, ಕಾಂಗ್ರೆಸ್ ಗೆ ದ್ರೋಹ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ ಎಂದು ಚುನಾಯಿತ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದ ವೀಣಾಅಚ್ಚಯ್ಯ, ಬೇರೆ ಪಕ್ಷಗಳನ್ನು ಟೀಕಿಸುವ ಬದಲು ನಾವು ಪಕ್ಷ ನಿಷ್ಠೆಯನ್ನು ಪ್ರದರ್ಶಿಸೋಣ ಎಂದರು.
ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು ಗ್ರಾ.ಪಂ ಪ್ರತಿನಿಧಿಗಳ ಅಂಕಿ, ಅಂಶದ ಅಗತ್ಯವಿಲ್ಲ, ಪ್ರಾಮಾಣಿಕವಾಗಿ ಮತದಾನ ಮಾಡುವ ಮೂಲಕ ಪ್ರತಿಯೊಬ್ಬರು ಕಾಂಗ್ರೆಸ್ ಋಣ ತೀರಿಸಬೇಕು ಎಂದು ಮನವಿ ಮಾಡಿದರು.
ಈಗ ವಿಧಾನ ಪರಿಷತ್ ಚುನಾವಣೆ ಗೆಲ್ಲುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳನ್ನು ಗೆಲ್ಲುವ ಉತ್ಸಾಹಕ್ಕೆ ನಾಂದಿ ಹಾಡಬೇಕೆಂದು ವೀಣಾಅಚ್ಚಯ್ಯ ಕರೆ ನೀಡಿದರು.