ಕೊರವೇ ಬೆಟ್ಟತ್ತೂರು ಅಧ್ಯಕ್ಷರಾಗಿ ಕೊಂಪುಳಿರ ಜನಾರ್ಧನ ಆಯ್ಕೆ

23/11/2021

ಮಡಿಕೇರಿ ನ.23 : ಮದೆ ಗ್ರಾ.ಪಂ ವ್ಯಾಪ್ತಿಯ ಬೆಟ್ಟತ್ತೂರು ವಿಭಾಗದ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿ ಕೊಂಪುಳಿರ ಜನಾರ್ಧನ ಹಾಗೂ ಗೌರವಾಧ್ಯಕ್ಷರಾಗಿ ಚೆರಿಯಮನೆ ನಂಜಪ್ಪ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕೆ.ಎ.ಸೋಮಯ್ಯ, ಕಾರ್ಯದರ್ಶಿಯಾಗಿ ಕೆ.ಸಿ.ತಿಮ್ಮಯ್ಯ, ನಿರ್ದೇಶಕರುಗಳಾಗಿ ಕೆ.ಎ.ಕುಜ್ಞಪ್ಪ, ಕೆ.ಕೆ.ದೇವಿಪ್ರಸಾದ್, ಸಿ.ಎಂ.ಲೋಪಯ್ಯ, ಕೆ.ಎ.ಪೊನ್ನಪ್ಪ, ಯಂ.ಡಿ.ಪೊನ್ನಪ್ಪ, ಕೆ.ಡಿ.ಗೌರಮ್ಮ, ಕೆ.ಎ.ಮೇದಪ್ಪ ಹಾಗೂ ಸಿ.ಎಸ್.ಚಂದ್ರಶೇಖರ್ ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ಕೊರವೇ ಅಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಗ್ರಾಮ ಮಟ್ಟದಲ್ಲಿ ಕೊರವೇಯನ್ನು ಬಲಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.