ಮ್ಯಾನ್ಯುಯಲ್ ಸ್ಕಾವೆಂಜರ್‌ಗಳ ವಿಶೇಷ ಮರು ಸಮೀಕ್ಷೆ ತರಬೇತಿ ಕಾರ್ಯಾಗಾರ

23/11/2021

ಮಡಿಕೇರಿ ನ.23 : ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕಾವೆಂಜರ್‌ಗಳ ವಿಶೇಷ ಮರು ಸಮೀಕ್ಷೆ ಕೈಗೊಳ್ಳುವ ಸಂಬoಧ ತರಬೇತಿ ಕಾರ್ಯಾಗಾರವು ಮಂಗಳವಾರ ನಗರದ ನಗರಸಭೆ ಸಭಾಂಗಣದಲ್ಲಿ ನಡೆಯಿತು.
ಪರಿಸರ ಎಇಇ ಸೌಮ್ಯ ಅವರು ಮಾಹಿತಿ ನೀಡಿದರು. ಡಿಯುಡಿಸಿ ಎಇಇ ನಟರಾಜು, ನಗರಸಭೆ ಎಇಇ ರಾಜೇಂದ್ರ ಕುಮಾರ್, ವಿರಾಜಪೇಟೆ ಪ.ಪಂ.ಮುಖ್ಯಾಧಿಕಾರಿ ಚಂದ್ರುಕುಮಾರ್, ಸಿಬ್ಬಂದಿಗಳು ಇತರರು ಇದ್ದರು.
ಜಿಲ್ಲೆಯ ಮಡಿಕೇರಿ ನಗರಸಭೆ, ವಿರಾಜಪೇಟೆ, ಕುಶಾಲನಗರ, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಲ್ಲಿ ಈ ನಾಲ್ಕು ಸ್ಥಳೀಯ ಸಂಸ್ಥೆಗಳಲ್ಲಿ ತಂಡವನ್ನು ರಚಿಸಿದ್ದು, ಈ ಸಂಬoಧ ಮಂಗಳವಾರ ನಗರದ ನಗರಸಭೆ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು.