ಶ್ರದ್ಧಾಭಕ್ತಿಯಿಂದ ಜರುಗಿದ ಕುಶಾಲನಗರ ಶ್ರೀಗಣಪತಿ ದೇವಸ್ಥಾನದ ರಥೋತ್ಸವ

23/11/2021

ಮಡಿಕೇರಿ ನ.23 : ಕುಶಾಲನಗರದ ಶ್ರೀ ಗಣಪತಿ ದೇವಸ್ಥಾನ ಸಮಿತಿ ವತಿಯಿಂದ ವಾರ್ಷಿಕ ರಥೋತ್ಸವ  ಶ್ರದ್ಧಾಭಕ್ತಿಯಿಂದ ಜರುಗಿತು. ಅಭಿಷೇಕ, ಅಲಂಕಾರ, ಹೋಮಹವನಾದಿ ವಿಶೇಷ ಪೂಜೆ ನಡೆಯಿತು. ಮಹಾಪೂಜೆ, ಮಹಾಮಂಗಳಾರತಿಯ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ವಿಶೇಷ ಪೂಜೆಯಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಪಾಲ್ಗೊಂಡಿದ್ದರು.