ಕೊಡಗು ಬಿಜೆಪಿಗೆ ಬೇತಾಳ ಕಾಟ : ಎ.ಎಸ್.ಪೊನ್ನಣ್ಣ ವ್ಯಂಗ್ಯ

24/11/2021

ಮಡಿಕೇರಿ ನ.24 : ಕೊಡಗಿನಲ್ಲಿ ಬಿಜೆಪಿ ಒಡೆದ ಮನೆಯಾಗಿದ್ದು, ಬೇತಾಳ ಕಾಟ ಶುರುವಾಗಿದೆ. ಆದ್ದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಬಹುಮತ ಗಳಿಸಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಜಿಲ್ಲೆಯ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಸಂದರ್ಭ ಯಾವುದೋ ಬೇತಾಳ ಅಡ್ಡಿಯಾಗಿತ್ತಂತೆ, ಇದೀಗ ಸುನೀಲ್ ಸುಬ್ರಮಣಿ ಅವರಿಗೆ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ದೊರೆಯದೆ ಇರಲು ಬೇತಾಳವೇ ಅಡ್ಡಿಯಾಗಿರಬಹುದೇ ಎಂದು ವ್ಯಂಗ್ಯವಾಡಿದ ಅವರು, ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲವೆಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಾಂತೆಯoಡ ವೀಣಾಅಚ್ಚಯ್ಯ, ಅಭ್ಯರ್ಥಿ ಮಂಥರ್ ಗೌಡ, ಪ್ರಮುಖರಾದ ಕೆ.ಎಂ.ಲೋಕೇಶ್ ಹಾಗೂ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಉಪಸ್ಥಿತರಿದ್ದರು.