ಕೋಡಿ ಚಂದ್ರಶೇಖರ್ ನಿಧನಕ್ಕೆ ಸಂತಾಪ

24/11/2021

ಮಡಿಕೇರಿ ನ.24 : ಕೊಡಗು ಜಿಲ್ಲಾ ಸರ್ವೋದಯ ಸಮಿತಿಯ ಖಜಾಂಚಿ ಹಾಗೂ ಗೌಡ ಸಮಾಜದ ಪದಾಧಿಕಾರಿ ಕೋಡಿ ಚಂದ್ರಶೇಖರ್ (54) ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಗರದ ರಾಘವೇಂದ್ರ ದೇವಾಲಯದ ಸಮೀಪವಿರುವ ತಮ್ಮ ಮನೆಯಲ್ಲಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮಡಿಕೇರಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
::: ಸಂತಾಪ :::
ಕೋಡಿ ಚಂದ್ರಶೇಖರ್ ನಿಧನಕ್ಕೆ ಕೊಡಗು ಜಿಲ್ಲಾ ಸರ್ವೋದಯ ಸಮಿತಿಯ ಸ್ಥಾಪಕಾಧ್ಯಕ್ಷ ಟಿ.ಪಿ.ರಮೇಶ್, ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಹಾಗೂ ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸೂದನ ಈರಪ್ಪ ಅವರು ಚಂದ್ರಶೇಖರ್ ನಿಧನಕ್ಕೆ ದು:ಖ ವ್ಯಕ್ತಪಡಿಸಿದ್ದಾರೆ.