ಕಾಟಕೇರಿ ಜಂಕ್ಷನ್ : ಚಿಪ್ಪು ಹಂದಿಯ ಚಿಪ್ಪು ಮಾರಾಟ ಯತ್ನ : ಆರೋಪಿ ಬಂಧನ

24/11/2021

ಮಡಿಕೇರಿ ನ.24 : ಅಕ್ರಮವಾಗಿ ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಕೊಡಗು ಸಿ.ಐ.ಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ.
ಮಡಿಕೇರಿ ತಾಲ್ಲೂಕು ಕಾಟಕೇರಿ ಜಂಕ್ಷನ್ ನಿಂದ ಮಂಗಳೂರು ಕಡೆಗೆ ಹೋಗುವ ರಸ್ತೆ ಬಳಿ ಅಪ್ಪಯ್ಯ ಎಂ.ಎA (ಟಾಟು) ಎಂಬಾತ ಚಿಪ್ಪುಗಳನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಮಾಲು ಸಹಿತ ಆರೋಪಿಯನ್ನು ಬಂಧಿಸಿದರು.
ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಮಹಾನಿರೀಕ್ಷಕ ಕೆ.ವಿ.ಶರತ್‌ಚಂದ್ರ ನಿರ್ದೇಶನದ ಮೇರೆಗೆ ಮಡಿಕೇರಿ ಘಟಕದ ಪೊಲೀಸ್ ಅಧೀಕ್ಷ ಎಸ್.ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಸಿ.ಯು.ಸವಿ, ಹೆಡ್‌ಕಾನ್ಸ್ ಟೇಬಲ್‌ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್ ಹಾಗೂ ಮೋಹನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.