ಮಳೆಹಾನಿ ಪರಿಹಾರಕ್ಕಾಗಿ ತಂತ್ರಾಂಶದಲ್ಲಿ ದಾಖಲೆಗಳನ್ನು ನಮೂದಿಸಿ

24/11/2021

ಮಡಿಕೇರಿ ನ.24 : ಸೋಮವಾರಪೇಟೆ ತಾಲ್ಲೂಕಿನ ರೈತರಿಗೆ 2021-22 ನೇ ಸಾಲಿನ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ಮಾಹೆಯಲ್ಲಿ ಬಿದ್ದ ಅಕಾಲಿಕ ಮಳೆ, ಪ್ರಕೃತಿ ವಿಕೋಪದಡಿ ಹಾನಿಯಾಗಿರುವ ಬೆಳೆಗಳಿಗೆ ಪರಿಹಾರ ನೀಡುವ ಸಂಬoಧ ಪರಿಹಾರ ತಂತ್ರಾoಶದಲ್ಲಿ ದಾಖಲೆಗಳನ್ನು ನಮೂದಿಸಬೇಕಿದೆ.
ಬೆಳೆ ಹಾನಿಯಾಗಿರುವ ರೈತರು ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಮೊಬೈಲ್ ಸಂಖ್ಯೆಯೊoದಿಗೆ ಅರ್ಜಿ ಸಲ್ಲಿಸಬಹುದು.
ಕಾಫಿ ಬೆಳೆಗೆ ಸಂಬoಧಪಟ್ಟoತೆ ಕಾಫಿ ಬೋರ್ಡ್ ವತಿಯಿಂದ ಘೋಷಿಸಲಾದ ಶೇ.33 ಕ್ಕಿಂತ ಹೆಚ್ಚಿಗೆ ಕಾಫಿ ಬೆಳೆ ನಷ್ಟ ಉಂಟಾಗಿರುವ ಸೋಮವಾರಪೇಟೆ ತಾಲ್ಲೂಕಿನ ಗ್ರಾಮಗಳಾದ ಶಾಂತಳ್ಳಿ ಹೋಬಳಿಯ, ಅಬ್ಬಿಮಠ, ಬೆಟ್ಟದಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು, ಹರಗ, ಕೂತಿ, ಕೊತ್ತನಳ್ಳಿ, ಕುಮಾರಳ್ಳಿ, ಕುಂದಳ್ಳಿ, ಶಾಂತಳ್ಳಿ, ತಾರಶೆಟ್ಟಳ್ಳಿ ತೋಳೂರು ಶೆಟ್ಟಳ್ಳಿ ಮತ್ತು ಸುಂಟಿಕೊಪ್ಪ ಹೋಬಳಿಯ ಗರ್ವಾಲೆ, ಮೂವತ್ತೊಕ್ಲು, ಶಿರಂಗಳ್ಳಿ, ಸೂರ್ಲಬ್ಬಿ ಮತ್ತು ಸೋಮವಾರಪೇಟೆ ಹೋಬಳಿಯ ಬಿಳಿಗೇರಿ, ಕಿರಗಂದೂರು, ತಾಕೇರಿಯ ಗ್ರಾಮಗಳ ಪರಿಹಾರ ಅರ್ಜಿಗಳನ್ನು ಸಂಬoಧಿಸಿದ ನಾಡ ಕಚೇರಿಗೆ ಸಲ್ಲಿಸಬೇಕು.
ತೋಟಗಾರಿಕಾ ಬೆಳೆಗಳಾದ ಕಾಳು ಮೆಣಸು ಹಾಗೂ ಇತರೆ ಬೆಳೆಗಳ ಪರಿಹಾರ ಅರ್ಜಿಗಳನ್ನು ಹಿರಿಯ ತೋಟಗಾರಿಕಾ ನಿರ್ದೇಶಕರ ವತಿಯಿಂದ ಘೋಷಿಸಲಾದ ಶೇ.33 ಕ್ಕಿಂತ ಹೆಚ್ಚಿಗೆ ಕಾಳು ಮೆಣಸು ಬೆಳೆ ನಷ್ಟ ಉಂಟಾಗಿರುವ ಸೋಮವಾರಪೇಟೆ ತಾಲ್ಲೂಕಿನ ಗ್ರಾಮಗಳಾದ ಶಾಂತಳ್ಳಿ ಹೋಬಳಿಯ, ಅಬ್ಬಿಮಠ, ಬೆಟ್ಟದಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು, ಹರಗ, ಕೂತಿ, ಕೊತ್ತನಳ್ಳಿ, ಕುಮಾರಳ್ಳಿ, ಕುಂದಳ್ಳಿ, ಶಾಂತಳ್ಳಿ, ತಲ್ತಾರೆಶೆಟ್ಟಳ್ಳಿ ತೋಳೂರು ಶೆಟ್ಟಳ್ಳಿ ಮತ್ತು ಸುಂಟಿಕೊಪ್ಪ ಹೋಬಳಿಯ ಗರ್ವಾಲೆ, ಮೂವತ್ತೊಕ್ಲು, ಶಿರಂಗಳ್ಳಿ, ಸೂರ್ಲಬ್ಬಿ ಮತ್ತು ಸೋಮವಾರಪೇಟೆ ಹೋಬಳಿಯ ಬಿಳಿಗೇರಿ, ಕಿರಗಂದೂರು, ತಾಕೇರಿಯ ಗ್ರಾಮಗಳ ತೋಟಗಾರಿಕಾ ಇಲಾಖೆ ಸೋಮವಾರಪೇಟೆಗೆ ಸಂಬoಧಿಸಿದ ನಾಡ ಕಚೇರಿಗೆ ಸಲ್ಲಿಸಬೇಕು.
ಕೃಷಿ ಇಲಾಖೆಗೆ ಸಂಬoಧಪಟ್ಟ ಬೆಳೆಗಳಾದ ಭತ್ತ ಇತರೆ ಬೆಳೆಗಳ ಪರಿಹಾರದ ಅರ್ಜಿಗಳನ್ನು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಸೋಮವಾರಪೇಟೆಗೆ ಸಂಬoಧಿಸಿದ ನಾಡ ಕಚೇರಿಯಲ್ಲಿ ಸಲ್ಲಿಸಲು ಹಾಗೂ ಈ ದಿನ ಜಂಟಿ ಸ್ಥಳ ತನಿಖೆ ನಡೆಸುತ್ತಿರುವ ಕಾಫಿ ಬೋರ್ಡ್ ತೋಟಗಾರಿಕೆ ಕೃಷಿ ಇಲಾಖೆ ಕಂದಾಯ ಇಲಾಖೆ ಇವರಿಂದ ಘೋಷಿಸುವ ಗ್ರಾಮಗಳಿಗೆ ಸಹ ಇನ್ನು ಮುಂದೆ ಅರ್ಜಿಗಳನ್ನು ಸ್ವೀಕರಿಸಲು ಕ್ರಮವಹಿಸಲಾಗುವುದು ಎಂದು ಸೋಮವಾರಪೇಟೆಯ ತಹಶೀಲ್ದಾರ್ ಗೋವಿಂದರಾಜು ಅವರು ತಿಳಿಸಿದ್ದಾರೆ.