ಸೋಮವಾರಪೇಟೆ : ಸಮಾಜ ಸೇವಕಿ ರುಬೀನಾರಿಗೆ ಸನ್ಮಾನ

24/11/2021

ಮಡಿಕೇರಿ ನ.24 : ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಜರುಗಿದ ಮಾತೃಭೂಮಿ ಸೇವಾ ಟ್ರಸ್ಟ್’ನ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯಮಟ್ಟದ ಮತು ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ.
ಸೋಮವಾರಪೇಟೆಯ ರುಬೀನಾ ಎಂ.ಎ. ರವರ ಸಮಾಜಸೇವೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಮನಗಂಡು ಮಾತೃಭೂಮಿ ಸೇವಾ ಟ್ರಸ್ಟಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ರುಬೀನಾರವರಿಗೆ “ಡಾ.ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಮಾತೃಭೂಮಿ ಟ್ರಸ್ಟಿನ ಅಧ್ಯಕ್ಷರು ಡಾ.ಜ್ಯೋತಿ ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ರಾಹುಲ್ ಕುಮಾರ್ ಶಹಪೂರವಾಡ್, ಚಲನಚಿತ್ರ ನಟ ಕಿಶೋರ್ ಕುಮಾರ್, ರೈಲ್ವೇ ಇಲಾಖೆಯ ಆನಂದ್, ಡಾ.ಚಂದನ್ ಮತ್ತು ಟ್ರಸ್ಟಿನ ಪದಾಧಿಕಾರಿಗಳು ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.