ಹಿರಿಕರ : ಕೋವಿಡ್ ಲಸಿಕಾ ಅಭಿಯಾನ

24/11/2021

ಸೋಮವಾರಪೇಟೆ ನ.24 : ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಿರಿಕರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ ನಡೆಯಿತು. ವೈದ್ಯಾಧಿಕಾರಿ ಇಂದೂಧರ್ ಶಿಬಿರ ಉದ್ಘಾಟಿಸಿದರು. ಗ್ರಾಮ ನಿವಾಸಿಗಳು ಲಸಿಕೆ ಹಾಕಿಸಿಕೊಡರು. ಗೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಈ.ವೆಂಕಟೇಶ್, ಗೌಡಳ್ಳಿ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ದಿನೇಶ್, ಆಶಾ ಕಾರ್ಯಕರ್ತೆ ಎಚ್.ಕೆ. ಪ್ರೇಮಾ, ಆರೋಗ್ಯ ಕಾರ್ಯಕರ್ತೆ ಶ್ವೇತ, ಅಂಗನವಾಡಿ ಕಾರ್ಯಕರ್ತೆ ಹೇಮಲತಾ ಕಾರ್ಯಕ್ರಮದಲ್ಲಿದ್ದರು.