ಮಂಥರ್ ಗೌಡ ಚುನಾವಣಾ ಪ್ರಚಾರ ಬಿರುಸು

25/11/2021

ಮಡಿಕೇರಿ ನ.25 :   ವಿಧಾನ ಪರಿಷತ್ ಚುನಾವಣೆಯ ಕೊಡಗು ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಪ್ರಚಾರ ಕಾರ್ಯ ಬಿರುಸುಗೊಳಿಸಿದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಪೋಕ್ಲು ಬ್ಲಾಕ್ ಭಾಗದಿಂದ ಇಂದು ಪ್ರಚಾರ ಕಾರ್ಯ ಆರಂಭಿಸಿದರು.  ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಅವರು ಪ್ರಮುಖರೊಂದಿಗೆ ಚರ್ಚಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ, ಕೆಪಿಸಿಸಿ ಸಂವಹನ ವಕ್ತಾರ ಟಿ.ಪಿ.ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್, ರಾಜೇಶ್ವರಿ, ಬೇಕಲ ರಮಾನಾಥ್, ಕೊಲ್ಯದ ಗಿರೀಶ್, ನೆರವಂಡ ಉಮೇಶ್, ಸೂರಜ್ ಹೊಸೂರು, ಹನೀಫ್ ಸಂಪಾಜೆ ಮತ್ತಿತರರು ಹಾಜರಿದ್ದರು.
ಸಂಪಾಜೆ ಹಾಗೂ ಚೆಂಬು ಭಾಗದ ಸದಸ್ಯರೊಡನೆ ಮಂಥರ್ ಗೌಡ ಚರ್ಚಿಸಿದರು.