ರೋಚಕ ಪಂದ್ಯಾವಳಿ : ನ.28 ರಂದು ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್

25/11/2021

ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಭಾನುವಾರ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್ 2 ನಡೆಯಲಿದೆ ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಲಿದ್ದಾರೆ.
ಒಟ್ಟು 8 ತಂಡದಲ್ಲಿ ಕೊಡಗು ಪ್ರೆಸ್ ಕ್ಲಬ್ ಸದಸ್ಯರಾಗಿರುವ 98 ಆಟಗಾರರು ಆಟವಾಡಲಿದ್ದಾರೆ. ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ನೀಡುವ 89 ಸಾವಿರ ರೂಪಾಯಿ ನಗದು ಬಹುಮಾನವನ್ನು ಬೆಂಗಳೂರಿನ ಯುಫೋರಿಯಾಜ್ ಗ್ರೂಪ್ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ನೀಡುವ 50 ಸಾವಿರ ರೂಪಾಯಿ ನಗದು ಬಹುಮಾನವನ್ನು ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ಪ್ರಾಯೋಜಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಪರಾಭವಗೊಳ್ಳುವ ಎರಡು ತಂಡಕ್ಕೆ ನೀಡುವ ತಲಾ 10 ಸಾವಿರ ರೂಪಾಯಿ ನಗದು ಬಹುಮಾನವನ್ನು ಸಮಾಜ ಸೇವಕ ಕದ್ದಣಿಯಂಡ ಹರೀಶ್ ಬೋಪಣ್ಣ ಪ್ರಾಯೋಜಿಸಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ನೀಡುವ ಎಲ್ಲಾ ಟ್ರೋಫಿಗಳನ್ನು ನಾಪಂಡ ಮುತ್ತಪ್ಪ& ಮುದ್ದಪ್ಪ ಸಹೋದರರು ಪ್ರಾಯೋಜಿಸಿದ್ದಾರೆ.
ಬೊಳ್ಳಜೀರ ಬಿ. ಅಯ್ಯಪ್ಪ ಮಾಲೀಕತ್ವದ ಅಜ್ಜಮಕ್ಕಡ ವಿನು ಕುಶಾಲಪ್ಪ ನಾಯಕತ್ವದ ನಾಡ ಪೆದ ಆಶಾ, ನವೀನ್ ಡಿಸೋಜ ಮಾಲೀಕತ್ವದ ಆದರ್ಶ್ ಅದ್ಕಲೇಗಾರ್ ನಾಯಕತ್ವದ ಕೊಡಗು ಲೈವ್ ಈಗಲ್ಸ್, ಸಣ್ಣುವಂಡ ಕಿಶೋರ್ ನಾಚಪ್ಪ ಮಾಲೀಕತ್ವದ ಎನ್.ಎಂ. ದಿನೇಶ್ ನಾಯಕತ್ವದ ಗೋಣಿಕೊಪ್ಪ ಮಿಡಿಯಾ ಕಿಂಗ್ಸ್, ಜಯಪ್ರಕಾಶ್ ಮಾಲೀಕತ್ವದ ಶಿವರಾಜ್ ನಾಯಕತ್ವದ ಕುಶಾಲನಗರ ಸೆನ್ಸಾ, ಕಸ್ತೂರಿ ಪ್ರೇಮ್ ಮಾಲೀಕತ್ವದ ಸುವರ್ಣ ಮಂಜು ನಾಯಕತ್ವದ ಚಿತ್ತಾರ ಲಯನ್ಸ್, ಬಿ.ಎಸ್. ಲೋಕೇಶ್ ಸಾಗರ್ ಮಾಲೀಕತ್ವದ ಎಸ್.ಎ. ಮುರಳೀಧರ್ ನಾಯಕತ್ವದ ಕಾವೇರಿ ಮಕ್ಕಳು, ಪುತ್ತಂ ಪ್ರದೀಪ್ ಮಾಲೀಕತ್ವದ ಎ.ಎಸ್. ಮುಸ್ತಫಾ ನಾಯಕತ್ವದ ಮಿಡಿಯಾ ಕ್ಯಾಪ್ಟನ್ 12, ಶರ್ಫುದ್ದೀನ್ ಮಾಲೀಕತ್ವದ ಅಜ್ಜಮಾಡ ರಮೇಶ್ ಕುಟ್ಟಪ್ಪ ನಾಯಕತ್ವದ ಟೀಮ್ ಇಂಡಿಯಾ ತಂಡಗಳ ನಡುವೆ ಸೆಣಸಾಟ ನಡೆಯಲಿದೆ.
ಲೀಗ್ ಹಂತದಲ್ಲಿ ತಲಾ ನಾಲ್ಕು ತಂಡಗಳು ಪ್ರತ್ಯೇಕ ಗುಂಪಿನಲ್ಲಿ ಸೆಣಸಾಟ ನಡೆಸಲಿವೆ. ಪ್ರಥಮ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಲಿವೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿವಿಧ ವಿಭಾಗದಲ್ಲಿ ಅತ್ಯುತ್ತಮ ಆಟದ ಪ್ರದರ್ಶನ ನೀಡುವ ಆಟಗಾರರಿಗೆ ಆಕರ್ಷಕ ಬಹುಮಾನ ಘೋಷಿಸಲಾಗಿದೆ. ಉತ್ತಮ ಕ್ಯಾಚ್‌ಗೆ ನಾಟಿ ಕೋಳಿ ಬಹುಮಾನವಾಗಿ ನೀಡುತ್ತಿರುವುದು ವಿಶೇಷ.
ಉದ್ಘಾಟನಾ ಸಮಾರಂಭ
ಅAದು ಬೆಳಗ್ಗೆ 11.30 ಗಂಟೆಗೆ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಕ್ರಿಕೆಟ್ ಪಂದ್ಯಾವಳಿಗೆ ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ಚಾಲನೆ ನೀಡಲಿದ್ದಾರೆ. ಮುಖ್ಯಅತಿಥಿಗಳಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಯುಫೋರಿಯಾಜ್ ಗ್ರೂಪ್ ಸಂಸ್ಥಾಪಕ ಎಸ್. ಆನಂದ್, ಸಮಾಜ ಸೇವಕ ಕದ್ದಣಿಯಂಡ ಹರೀಶ್ ಬೋಪಣ್ಣ ಪಾಲ್ಗೊಳ್ಳಲಿದ್ದಾರೆ.
ಬಹುಮಾನ ವಿತರಣೆ
ಮಡಿಕೇರಿಯ ಪತ್ರಿಕಾ ಭವನ ಸಭಾಂಗಣದಲ್ಲಿ ರಾತ್ರಿ 7 ಗಂಟೆಗೆ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಉದ್ಯಮಿ ನಾಪಂಡ ಮುತ್ತಪ್ಪ ಬಹುಮಾನ ವಿತರಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಯುಫೋರಿಯಾಜ್ ಗ್ರೂಪ್ ಸಿಇಒ ಅಸ್ಕರ್ ರಿಚ್ಚಿ ಚಾರ್ಲ್ಸ್ ಪಾಲ್ಗೊಳ್ಳಲಿದ್ದಾರೆ.