ವಿರಾಜಪೇಟೆ ಪೂಮಾಲೆ ಮಂದ್ ನಲ್ಲಿ ಕೋಲಾಟ ಸಂಭ್ರಮ

25/11/2021

ವಿರಾಜಪೇಟೆ ನ.25 : ‘ಆರಾಯಿರ ನಾಡ್’ರ ಹುತ್ತರಿ ಕೋಲಾಟವು ವಿರಾಜಪೇಟೆಯ ಪೂಮಾಲೆ ಮಂದ್‌ನಲ್ಲಿ ವಿವಿಧ ಕೋಲಾಟ ಪ್ರಕಾರಗಳನ್ನು ಒಳಗೊಂಡoತೆ ಸಂಪನ್ನಗೊoಡಿತು.

ವಿರಾಜಪೇಟೆಯ ಆರಾಯಿರ ನಾಡ್ ಎನ್ನುವುದು ಬೈರನಾಡ್, ಎಡೆನಾಡ್, ಬೇಟೋಳಿನಾಡ್ ಮತ್ತು ಪೆರುವನಾಡ್ ಎಂಬ ನಾಲ್ಕು ನಾಡುಗಳಾಗಿ ವಿಂಗಡಣೆಗೊoಡು 17 ಗ್ರಾಮಗಳ ಗ್ರಾಮಸ್ಥರ ಹುತ್ತರಿ ಕೋಲಾಟವು ನಗರದ ಕೊಡವ ಸಮಾಜದ ಬಳಿಯ ಪೂಮಾಲೆ ಮಂದ್‌ನಲ್ಲಿ ವಿಜೃಂಭಣೆಯಿoದ ನಡೆಯಿತು.

ಪೂಮಾಲೆ ಮಂದ್‌ಗೆ ಕೊಡಗಿನ ಸಾಂಪ್ರದಾಯಿಕ ಉಡುಪು ತೊಟ್ಟು ಬಂದ ಗ್ರಾಮಸ್ಥರನ್ನು ಒಡ್ಡೋಲಗದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಮಧ್ಯಾಹ್ನ ಮಂದ್‌ನ ನಡು ಭಾಗದಲ್ಲಿರುವ ಆಲದ ಮರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಸಾಂಪ್ರದಾಯಿಕ ನಾಡ್ ಕೋಲು, ಪರಿಯ ಕಳಿ, ವಾಲಗತ್ತಾಟ್, ಮಹಿಳೆಯರಿಗೆ ಉಮ್ಮತ್ತಾಟ್ ಮತ್ತು ಕೋಲಾಟಗಳು ನಡೆದವು.

ಹುತ್ತರಿ ಕೋಲಾಟವು ಐದು ಗ್ರಾಮಗಳಲ್ಲಿನ ಮುಕ್ಕಾಟಿರ, ಅಮ್ಮಣಕುಟ್ಟಂಡ, ಪೊನ್ನಕಚ್ಚೀರ, ಕೊಳುವಂಡ ಮತ್ತು ಅಜ್ಜಿನಿಕಂಡ ಮನೆತನದ ನಾಡು ತಕ್ಕರು, ದೇವತಕ್ಕರ ಸಮ್ಮುಖದಲ್ಲಿ ನಡೆಯುತ್ತದೆಂದು ಸಮಿತಿಯ ಉಪಾಧ್ಯಕ್ಷರಾದ ವಾಟೇರಿರ ಶಂಕರಿ ಪೂವಯ್ಯ ಮಾಧ್ಯಮಗಳಿಗೆ ತಿಳಿಸಿದರು.

ಪೂಮಾಲೆ ಮಂದ್ ಹುತ್ತರಿ ಕೋಲಾಟ ಸಮಿತಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸುಧೀರ್, ಕಾರ್ಯದÀರ್ಶಿ ಮಚ್ಚೇಟಿರ ತಮ್ಮಯ್ಯ, ಮರಣ ಫಂಡ್ ಅಧ್ಯಕ್ಷರಾದ ಚೇಂದoಡ ಪೊನ್ನಪ್ಪ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಬೈರನಾಡ್ ಭಾಗದ ಬೈರಂಬಾಡ, ಹಾಲುಗುಂದ, ಒಂಟಿಯoಗಡಿ, ದೇವಣಗೇರಿ, ತಲಗಟ್ಟಕೇರಿ ಮತ್ತು ಹಚ್ಚಿನಾಡು ಗ್ರಾಮಗಳು ಎಡೆನಾಡು ಭಾಗದ ಕುಕ್ಲೂರು, ಚೆಂಬೆಬೆಳ್ಳೂರು, ಐಮಂಗಲ, ಮಗ್ಗುಲ ಮತ್ತು ವೈಪಡ ಗ್ರಾಮಗಳು, ಬೇಟೋಳಿನಾಡ್ ಭಾಗದ ಆರ್ಜಿ, ಬೇಟೋಳಿ ಮತ್ತು ಪೆರುವನಾಡ್ ಭಾಗದ ಬಿಟ್ಟಂಗಾಲ, ನಾಂಗಾಲ ಮತ್ತು ಬಾಳುಗೋಡು ಗ್ರಾಮದ ಗ್ರಾಮಸ್ಥರು ವಾರ್ಷಿಕ ಹುತ್ತರಿ ಕೋಲಾಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.