ಕಾಂಗ್ರೆಸ್, ಬಿಜೆಪಿ ಕಂಬನಿ

25/11/2021

ಮಡಿಕೇರಿ ನ.25 : ವಿವಿಧ ಸಂಘ ಸಂಸ್ಥೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದ ಸ್ನೇಹ ಜೀವಿ ಕೋಡಿ ಚಂದ್ರಶೇಖರ್ ಅವರ ಅಕಾಲಿಕ ನಿಧನ ತೀವ್ರ ದು:ಖವನ್ನು ತಂದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ಸಂತಾಪ ಸೂಚಿಸಿದ್ದಾರೆ.
::: ಬಿಜೆಪಿ ಕಂಬನಿ :::
ಕೋಡಿ ಚಂದ್ರಶೇಖರ್ ಅವರ ನಿಧನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಹಾಗೂ ಜಿಲ್ಲಾ ವಕ್ತಾರ ಮಹೇಶ್ ಜೈನಿ ಸಂತಾಪ ಸೂಚಿಸಿದ್ದಾರೆ. ಚಂದ್ರಶೇಖರ್ ಅಗಲಿಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.