ಕೊಡಗು ಪ್ರಜಾ ಪರಿವರ್ತನಾ ವೇದಿಕೆಯ ಉಪಾಧ್ಯಕ್ಷರಾಗಿ ಫಿರೋಜ್ ಖಾನ್ ಆಯ್ಕೆ

25/11/2021

ಮಡಿಕೇರಿ ನ.25 : ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷರನ್ನಾಗಿ ಸುಂಟಿಕೊಪ್ಪದ ಎಂ.ಆರ್.ಫಿರೋಜ್ ಖಾನ್ ಅವರನ್ನು ಆಯ್ಕೆ ಮಾಡಿರುವುದಾಗಿ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಸ್.ಮುತ್ತಪ್ಪ ತಿಳಿಸಿದ್ದಾರೆ.
ದುರ್ಬಲರ ಮತ್ತು ಹಿಂದುಳಿದ ವರ್ಗಗಳ ಮೂಲಭೂತ ಸಮಸ್ಯೆಗಳಿಗೆ ಸೂಕ್ತ ಕಾಲದಲ್ಲಿ ಸ್ಪಂದಿಸುವ ಸಲುವಾಗಿ ಪದಾಧಿಕಾರಿಗಳ ನೇಮಕದ ಮೂಲಕ ಸಂಘಟನೆಯನ್ನು ಬಲಪಡಿಸಲಾಗುತ್ತಿದೆಂದು ಅವರು ಹೇಳಿದ್ದಾರೆ.