ಪಶುಪಾಲನೆಯಲ್ಲಿ ಸ್ವಯಂ ಉದ್ಯೋಗವಕಾಶ : ಅರ್ಜಿ ಸಲ್ಲಿಸಲು ಡಿ.6 ಕೊನೆಯ ದಿನ

25/11/2021

ಮಡಿಕೇರಿ ನ.25 : ನಿರುದ್ಯೋಗಿ ವಿದ್ಯಾವಂತ ಗ್ರಾಮೀಣ ಯುವಕ/ ಯುವತಿಯರಿಗೆ ಪಶುಪಾಲನೆಯಲ್ಲಿ ಸ್ವಯಂ ಉದ್ಯೋಗವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮೈತ್ರಿ ಕಾರ್ಯಕರ್ತರನ್ನಾಗಿ ಅರ್ಹ ಅಭ್ಯರ್ಥಿಗಳಿಂದ 3 ತಿಂಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
10 ನೇ ತರಗತಿ ಉತ್ತೀರ್ಣರಾಗಿರುವ 18 ರಿಂದ 38 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿ.6 ಕೊನೆಯ ದಿನವಾಗಿದೆ. ರಾಸುಗಳಿಗೆ ಕೃತಕ ಗರ್ಭಧಾರಣೆ ಮಾಡುವುದು, ಲಸಿಕೆ ಹಾಕುವುದು, ಪಶುವೈದ್ಯಕೀಯ ಪ್ರಥಮ ಚಿಕಿತ್ಸೆ. ಜಾನುವಾರು ವಿಮೆಯ ಏಜೆಂಟ್, ಜಾನುವಾರು ಪಡಿತರ ಸಮತೋಲನೆ, ಹಾಲು ಇಳುವರಿ ದಾಖಲಿಸುವುದು, ರಾಷ್ಟ್ರೀಯ ಡಾಟಾಬೇಸ್ ಮಾಹಿತಿ ನಮೂದಿಸುವುದು, ಇತರೆ ಇಲಾಖಾ ಕಾರ್ಯಕ್ರಮಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿಯ ಅವಧಿಯಲ್ಲಿ ಮಾಹೆಯಾನ ರೂ.1500 ಸ್ಟೈಪೆಂಡ್ ನೀಡಲಾಗುವುದು.
ತರಬೇತಿಯ ನಂತರ ಇಲಾಖೆ ನಿಗಧಿಪಡಿಸಿದ ಸ್ಥಳಗಳಲ್ಲಿ ದೈನಂದಿನ ಕೆಲಸ ಕಾರ್ಯಗಳಿಗಾಗಿ ಮೊದಲ 3 ವರ್ಷದ ಅವಧಿಗೆ ಮಾಹೆಯಾನ ಕ್ರಮವಾಗಿ ಮೊದಲನೇ ವರ್ಷದಲ್ಲಿ ರೂ.1500, 2 ನೇ ವರ್ಷದಲ್ಲಿ ರೂ.1200, 3 ನೇ ವರ್ಷದಲ್ಲಿ ರೂ.800 ರಂತೆ ಟೇಪರಿಂಗ್ ಅನುದಾನ ನೀಡಲಾಗುವುದು. 3 ವರ್ಷಗಳ ನಂತರ ಕೈಗೊಂಡ ಪ್ರತಿ ಗರ್ಭಧಾರಣೆಗೆ ರೂ.50 ಹಾಗೂ ಜನಿಸಿದ ಪ್ರತಿ ಕರುವಿಗೆ ರೂ.50 ರಂತೆ ಪ್ರೋತ್ಸಾಹ ಧನ ನೀಡಲಾಗುವುದು. ಹಾಗೂ ಇಲಾಖೆಯ ಲಸಿಕೆ ಹಾಕುವ ಅಥವಾ ಇತರ ಇಲಾಖಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸರ್ಕಾರದಿಂದ ನಿಗಧಿಪಡಿಸಿದ ಗೌರವಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಹತ್ತಿರದ ಪಶುವೈದ್ಯಾಧಿಕಾರಿ ಅಥವಾ ಉಪ ನಿರ್ದೇಶಕರು ಪಶುಪಾಲನಾ ಇಲಾಖೆ ಮಡಿಕೇರಿ ಇವರ ದೂ.ಸಂ.9686217915 ನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಸುರೇಶ್ ಭಟ್ ಅವರು ತಿಳಿಸಿದ್ದಾರೆ.