ಶುಕ್ರವಾರ ಮಡಿಕೇರಿಯಲ್ಲಿ ರೈತರ ಹೋರಾಟದ ಸಂಭ್ರಮಾಚರಣೆ

25/11/2021

ಮಡಿಕೇರಿ ನ.25 : ದೇಶವ್ಯಾಪಿ ನಡೆಯುತ್ತಿದ್ದ ರೈತರ ಹೋರಾಟ ಆರಂಭಗೊoಡು ಒಂದು ವರ್ಷ ಪೂರೈಸಿದ ಹಿನ್ನೆಲೆ ಮತ್ತು ರೈತರಿಗೆ ಬೇಡವಾಗಿದ್ದ ಮೂರು ಕಾಯ್ದೆಗಳನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆದಿರುವುದರಿಂದ “ರೈತರ ಹೋರಾಟದ ಸಂಭ್ರಮಾಚರಣೆ” ನ.26 ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ರೈತಪರ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಡಾ.ಹೆಚ್.ಎಂ.ಕಾವೇರಿ ತಿಳಿಸಿದ್ದಾರೆ.
ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ತಿಮ್ಮಯ್ಯ ವೃತ್ತದವರೆಗೆ ಜಾಥಾ ನಡೆಸಿ ಮಧ್ಯಾಹ್ನ 1 ಗಂಟೆಗೆ ಮಾನವ ಸರಪಳಿ ನಿರ್ಮಿಸಲಾಗುವುದು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.