ಬೆಳೆಹಾನಿ ಪರಿಹಾರ ಅರ್ಜಿ ಸ್ವೀಕಾರ

25/11/2021

ಮಡಿಕೇರಿ ನ.25 : ಪ್ರಾಕೃತಿಕ ವಿಕೋಪದ ಅಕಾಲಿಕ ಮಳೆಯಿಂದಗಿ ಬೆಳೆಹಾನಿಯಾಗಿರುವ ಪ್ರದೇಶದ ಬಗ್ಗೆ ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಕಾರ್ಯವನ್ನು ನಡೆಸಲಾಗಿದೆ.
ಆ ದಿಸೆಯಲ್ಲಿ ಮಡಿಕೇರಿ ಹೋಬಳಿಯ ಬೆಳೆನಷ್ಟ ಶೇ.33 ಕ್ಕಿಂತ ಹೆಚ್ಚು ಹಾನಿಯಾಗಿರುವ ಪ್ರದೇಶವನ್ನು ನಮೂದಿಸಲಾಗಿದ್ದು ಅದರಂತೆ ಈ ಗ್ರಾಮಗಳ ವ್ಯಾಪ್ತಿಗೆ ಒಳಪಡುವ ಅರ್ಜಿದಾರರಿಂದ ಬೆಳೆಹಾನಿ ಪರಿಹಾರ ಅರ್ಜಿ ಸ್ವೀಕರಿಸಲಾಗುವುದು.
ಮಡಿಕೇರಿ ಕಸಬಾ ಹೋಬಳಿಗೆ ಸೇರಿದ ಗಾಳಿಬೀಡು, ನಿಡುವಟ್ಟು, ಬಾರಿಬೆಳ್ಳಚ್ಚು, ಕೆ.ನಿಡುಗಣೆ, ಹೆಬ್ಬೆಟ್ಟಗೇರಿ, ಹಚ್ಚಿನಾಡು, 1 ನೇ ಮೊಣ್ಣಂಗೇರಿ, ಕೆ.ಬಾಡಗ, ನಾಪೋಕ್ಲು ಹೋಬಳಿಗೆ ಸೇರಿದ ಚೇಲಾವರ, ಮರಂದೋಡ, ಯುವಕಪಾಡಿ, ನಾಲಡಿ, ಭಾಗಮಂಡಲ ಹೋಬಳಿಗೆ ಸೇರಿದ ಆವಂದೂರು, ಬೆಟ್ಟಗೇರಿ, ಬೆಟ್ಟತ್ತೂರು, ಪದಕಲ್ಲು, ಕೋಪಟ್ಟಿ, ಸಿಂಗತ್ತೂರು ಚೆರಂಡಟ್ಟಿ, ಕೊಟ್ಟೂರು, ಬಿ.ಬಾಡಗ, ಬೇಂಗೂರು, ಐವತ್ತೊಕು,್ಲ ಕಡಿಯತ್ತೂರು, ಕಾರಗುಂದ, ಸಂಪಾಜೆ ಹೋಬಳಿಗೆ ಸೇರಿದ ಮೇಕೇರಿ, ಬಿಳಿಗೇರಿ, ಹಾಕತ್ತೂರು, ಕಗ್ಗೋಡ್ಲು ಕೆ.ಪೆರಾಜೆ, ಪಿ,ಪೆರಾಜೆ ಎಂ.ಚೆoಬು, ಯು.ಚೆಂಬು, ಸಂಪಾಜೆ, ದಬ್ಬಡ್ಕ, ಕಲ್ಲಾಳ, ಮದೆ, ಕಾಟಕೇರಿ, ಹೆರವನಾಡು, ಅರ್ವತ್ತೋಕ್ಲು, ಅರೆಕಲ್ಲು ಈ ವ್ಯಾಪ್ತಿಗೆ ಒಳಪಟ್ಟ ಸಾರ್ವಜಿನಿಕರು ಬೆಳೆ ಹಾನಿಯಾಗಿದ್ದಲ್ಲಿ ಸಂಬoಧಪಟ್ಟ ನಾಡ ಕಚೇರಿಗಳಲ್ಲಿ ಅರ್ಜಿ ಸಲ್ಲಿಸುವಂತೆ ಮಡಿಕೇರಿ ತಾಲ್ಲೂಕು ತಹಶೀಲ್ದಾರರಾದ ಪಿ.ಎಸ್.ಮಹೇಶ್ ಕೋರಿದ್ದಾರೆ.