ಐಗೂರು ಸಹಕಾರ ಸಂಘಕ್ಕೆ 65.82 ರೂ. ಲಕ್ಷ ನಿವ್ವಳ ಲಾಭ

27/11/2021

ಸೋಮವಾರಪೇಟೆ ನ.27 : ಐಗೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2020-21ನೇ ಸಾಲಿನಲ್ಲಿ ಉತ್ತಮ ಸೇವೆ ನೀಡುವುದರೊಂದಿಗೆ 65.82 ರೂ. ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.18 ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ. ಎಚ್. ವಿಶ್ವನಾಥರಾಜೇಅರಸ್ ತಿಳಿಸಿದರು.
ಸಂಘದ ರೈತ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಂಘದ ಸದಸ್ಯರಿಗೆ ವರದಿ ಸಾಲಿನಲ್ಲಿ 97ರೂ. ಕೋಟಿ ವಹಿವಾಟು ನಡೆಸಲಾಗಿದೆ. ಕಳೆದ ಸಾಲಿನಲ್ಲಿ ನೀಡಿದ ಕೆ.ಸಿ.ಸಿ ಸಾಲವನ್ನು ಶೇ. 100 ರಷ್ಟು ವಸೂಲಾತಿ ಮಾಡಲಾಗಿದೆ.
ಸಂಘದಲ್ಲಿ 115 ಸ್ವಸಹಾಯ ಗುಂಪುಗಳು ವ್ಯವಹರಿಸುತ್ತಿದ್ದು ವರದಿ ಸಾಲಿನಲ್ಲಿ ವಿತರಿಸಿದ ಸ್ವಸಹಾಯ ಗುಂಪು ಸಾಲವನ್ನು ಶೇ. 100 ರಷ್ಟು ವಸೂಲಾತಿ ಮಾಡಲಾಗಿದ್ದು ವರದಿ ವರ್ಷ 83 ಸ್ವ ಸಹಾಯ ಗುಂಪುಗಳಿಗೆ ರೂ. 3.76 ಕೋಟಿ ಸಾಲ ವಿತರಿಸಲಾಗಿದೆ. ಸದಸ್ಯರು ಸಂಘದೊoದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡು, ತಾವು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿದಲ್ಲಿ ಇನ್ನೂ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭ ಪ್ರಥಮವಾಗಿ ಕೆ.ಸಿ.ಸಿ ಸಾಲ ಮರುಪಾವತಿಸಿದ ಸಣ್ಣ ಹಾಗೂ ದೊಡ್ಡ ರೈತರಿಗೆ, ಹಾಗೂ ಸ್ವಸಹಾಯ ಗುಂಪುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ಎಸ್.ಎಸ್.ಎಲ್.ಸಿ, ಪಿಯುಸಿ, ಹಾಗು ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಮಹಾಸಭೆಯಲ್ಲಿ ಉಪಾಧ್ಯಕ್ಷರಾದ ಕೆ. ಪಿ. ರೋಷನ ನಿರ್ದೇಶಕರುಗಳಾದ ಎಚ್. ಬಿ. ಶಿವಕುಮಾರ್, ಡಿ. ಎಸ್. ಚಂಗಪ್ಪ, ಎಲ್. ಎಂ. ರಾಜೇಶ್, ಡಿ. ಕೆ. ಪೂವಯ್ಯ, ಡಿ. ಸಿ. ಸಬಿತ, ಎಸ್. ಜಿ. ರಾಣಿ, ಬಿ. ಸಿ. ಸುನೀಲ್, ಎಚ್. ಜೆ. ಬಸಪ್ಪ, ಎಸ್. ಕೆ. ರಘು, ಹಾಗು ಮೇಲ್ವಿಚಾರಕರಾದ ಟಿ. ಆರ್. ಪವನ್ ಇದ್ದರು.