ಕೊಡಗು ಉಪಖಾಝಿ ಹಾಗೂ ಸುನ್ನೀ ಜಂಇಯ್ಯತ್ತುಲ್ ಉಲಮಾ ಒಕ್ಕೂಟದ ಜಿಲ್ಲಾಧ್ಯಕ್ಷರಿಗೆ ಸನ್ಮಾನ

27/11/2021

ಪಾಲಿಬೆಟ್ಟ ನ.27 : ಕೊಡಗು ಜಿಲ್ಲೆಯ ನೂತನ ಉಪಖಾಝಿಯಾಗಿ ನೇಮಿಸಲ್ಪಟ್ಟ ಶಾದುಲಿ ಫೈಝಿ ಆಝಾದ್ ನಗರ ಹಾಗೂ ಸುನ್ನೀ ಜಂಇಯ್ಯತ್ತುಲ್ ಉಲಮಾ ಒಕ್ಕೂಟದ ಕೊಡಗು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸೈಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ ಎಮ್ಮೆಮಾಡು ಅವರನ್ನು ಎಸ್ಎಸ್ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
      ಅದೇ ರೀತಿ ಎಸ್‌ವೈಎಸ್‌ನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸೈಯ್ಯದ್ ಇಲ್ಯಾಸ್ ತಂಙ್ಞಳ್‌ರವರನ್ನೂ ಜಿಲ್ಲಾ ಸಮಿತಿ ಸನ್ಮಾಸಿತು.
 ಎಸ್ಎಸ್ಎಫ್ ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ಅಧ್ಯಕ್ಷತೆ ವಹಿಸಿದ್ದರು. ಸುನ್ನೀ ಸಂಘಟನೆಗಳ ವಿವಿಧ ಉಲಮಾ ಹಾಗೂ ಉಮರಾ ನಾಯಕರು, ಸಾಮಾಜಿಕ ಮುಖಂಡರು ಭಾಗವಹಿಸಿದ್ದರು.