ಬೊಟ್ಟಿಯತ್ ನಾಡ್  ಕುಂದಾ ಬೆಟ್ಟದ ಬೊಟ್ಲಪ್ಪ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಕಾರ್ತಿಕ ಪೂಜೆ

29/11/2021

ಮಡಿಕೇರಿ ನ.29 : ಪೊನ್ನಂಪೇಟೆಯ ಬೊಟ್ಟಿಯತ್ ನಾಡ್  ಕುಂದಾ ಬೆಟ್ಟದ ಬೊಟ್ಲಪ್ಪ ದೇವಸ್ಥಾನದಲ್ಲಿ  ಕಾರ್ತಿಕ ಮಾಸದ ಕೊನೆಯ ದಿನದ ಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು. ಅಕ್ಕಪಕ್ಕದ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತರು ಶಿವಾರಾಧನೆ ಮಾಡಿದರು. ಮಹಾಪೂಜೆ ಮತ್ತು ಮಹಾಮಂಗಳಾರತಿಯ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.