ಮಕ್ಕಳ ಜ್ಞಾನವನ್ನು ಹೆಚ್ಚಿಸುವ ಬೆಂಗಳೂರಿನ ಎಚ್.ಎ.ಎಲ್ ಹೆರಿಟೇಜ್ ಸೆಂಟರ್ ಮತ್ತು ಏರೋಸ್ಪೇಸ್ ಮ್ಯೂಸಿಯಂ

30/11/2021

ಎಚ್.ಎ.ಎಲ್ ಹೆರಿಟೇಜ್ ಸೆಂಟರ್ ಮತ್ತು ಏರೋಸ್ಪೇಸ್ ಮ್ಯೂಸಿಯಂ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ವಾಯುಯಾನ ಮತ್ತು ವೈಮಾನಿಕ ತಂತ್ರಜ್ಞಾನಗಳಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳ ಮ್ಯೂಸಿಯಂ ಇದಾಗಿದೆ. 2001 ರಲ್ಲಿ ಸ್ಥಾಪನೆಯಾದ ಎಚ್ ಎ ಎಲ್ ಏರೋಸ್ಪೇಸ್ ವಸ್ತುಸಂಗ್ರಹಾಲಯವು ವಾಯುಯಾನ ಉತ್ಸಾಹಿಗಳನ್ನು ಕೈಬೀಸಿ ಕರೆಯುತ್ತದೆ. ಇಲ್ಲಿ 1040  ರಿಂದ ವಾಯುಯಾನದ ಬೆಳವಣಿಗೆಯ ಛಾಯಾಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದು.

ಈ ವಸ್ತು ಸಂಗ್ರಹಾಲಯದಲ್ಲಿ ಸುಂದರವಾದ ಹೊರಾಂಗಣ ಪ್ರದರ್ಶನಗಳು, ಗ್ರಂಥಾಲಯ, ಗುಲಾಬಿ ಉದ್ಯಾನ, ಮಕ್ಕಳ ಆಟದ ಸ್ಥಳ, ಗಿಡಮೂಲಿಕೆ ಉದ್ಯಾನ, ಮ್ಯೂಸಿಯಂ ಕ್ಯಾಂಪಸ್ ನ ಅವರಣದಲ್ಲಿ ಕಾಣಬಹುದು. ಈ ಸುಂದರವಾದ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಲು ಅತ್ಯುತ್ತಮವಾದ ಸಮಯವೆಂದರೆ ಬೆಳಗ್ಗೆ 9 ರಿಂದ ಸಂಜೆ 5 ರವೆಗೆ.