ಹೊರ ಜಿಲ್ಲೆಯ ಕಸದ ರಾಶಿ ಆನೆಕಾಡು ಬಳಿ ವಿಲೇವಾರಿ : ರೂ.3 ಸಾವಿರ ದಂಡ ವಿಧಿಸಿದ ಗ್ರಾ.ಪಂ

03/12/2021

ಮಡಿಕೇರಿ ಡಿ.3 : ಹೊರ ಜಿಲ್ಲೆಯ ಕಸದ ರಾಶಿಯನ್ನು ಸೋಮವಾರಪೇಟೆ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾ.ಪಂ ವ್ಯಾಪ್ತಿಯ ಆನೆಕಾಡು ರಸ್ತೆ ಬದಿ ವಿಲೇವಾರಿ ಮಾಡುತ್ತಿದ್ದ ಪ್ರಕರಣವನ್ನು ಪಂಚಾಯ್ತಿ ಪತ್ತೆ ಮಾಡಿದೆ.
ವಾಹನದಲ್ಲಿ ತಂದು ಕಸದ ರಾಶಿ ಸುರಿಯುತ್ತಿರುವ ಬಗ್ಗೆ ಮಾಹಿತಿ ಪಡೆದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದರು. ಕಸ ಸುರಿಯುತ್ತಿದ್ದವರಿಗೆ ಎಚ್ಚರಿಕೆ ನೀಡಿ ರೂ.3 ಸಾವಿರ ದಂಡ ವಿಧಿಸಿದರು. ಅಲ್ಲದೆ ಅದೇ ವ್ಯಕ್ತಿಗಳಿಂದ ಕಸ ತೆಗೆಸಿದರು.