ವಿಶ್ವ ವಿಕಲಚೇತನ ದಿನಾಚರಣೆ

03/12/2021

ವಿಶ್ವ ಸಂಸ್ಥೆಯು 1992 ಡಿಸೆಂಬರ್ 3 ರಂದು“ವಿಶ್ವ ವಿಕಲಚೇತನರ ದಿನವನ್ನು ಘೋಷಿಸಿತು”. ವಿಕಲ ಚೇತನರನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಸೇರಿಸುವ ಕುರಿತಂತೆ ಜನ ಜಾಗೃತಿಯನ್ನು ಮೂಡಿಸಲಾಗುತ್ತದೆ ಮತ್ತು ವಿಕಲಚೇತನರಿಗೂ ಸಮಾಜದ ಇತರೆ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳು ಸಿಗಬೇಕು ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ಈ ದಿನಾಚರಣೆಯ ಉದ್ದೇಶವಾಗಿದೆ.
ಡಿಸೆಂಬರ್ 3 ರಂದು ವಿಕಲಚೇತನರ ದಿನಾಚರಣೆಯ ಪ್ರಯುಕ್ತ ತಾಲೂಕು ಮಟ್ಟದಲ್ಲಿ ವಿಕಲಚೇತನರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕøತಿಕ ಸ್ಪರ್ಧೆಗಳು ನವೆಂಬರ್ ತಿಂಗಳಲ್ಲಿ ನಡೆಯುತ್ತಿದ್ದು, ವಿಜೇತರಾದವರಿಗೆ ಡಿ.3 ರಂದು ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮದಲ್ಲಿ ಬಹುಮಾನವನ್ನು ನೀಡಲಾಗುತ್ತದೆ. ಕೋವಿಡ್-19 ವೈರಸ್‍ನ ಭೀತಿಯಿಂದ ಕಳೆದ ವರ್ಷ ನಡೆಸಲಾಗಲಿಲ್ಲ.
“ಅಂಗವಿಕಲತೆ ಶಾಪವಲ್ಲ ಆಕಸ್ಮಿಕ” ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಕಾರ್ಯಗಳಿಂದ ಅಂಗವಿಕಲರಾಗುತ್ತಾರೆಂದು ಕೆಲವರು ಹೇಳುತ್ತಾರೆ. ಆದರೆ ಅದು ತಪ್ಪು. ಅಂಗವಿಕಲತೆಯ ಅಪೌಷ್ಟಿಕತೆ, ಅನುವಂಶೀಯತೆ, ಹತ್ತಿರದ ರಕ್ತ ಸಂಬಂಧದಲ್ಲಿ ಮದುವೆಯಾಗುವುದು, ಅಪಘಾತ ಇತ್ಯಾದಿ ಕಾರಣಗಳಿಂದಾಗಿ ಅಂಗವಿಕಲರಾಗುತ್ತಾರೆ.
ಕುಟುಂಬದಲ್ಲಿ ಸಾಮಾನ್ಯವಾಗಿ ಒಂದು ಮಗು ಜನಿಸಿದರೆ ಎಷ್ಟೊಂದು ಸಡಗರ ಸಂಭ್ರಮ. ಅದೇ ಒಂದು ವಿಶೇಷ ಚೇತನ ಮಗು ಹುಟ್ಟಿದರೆ ಇಡೀ ಕುಟುಂಬವೇ ನೋವು ಅನುಭವಿಸಬೇಕಾಗುತ್ತದೆ. ಅದರಲ್ಲಿಯೂ ಕುಟುಂಬದಲ್ಲಿ ಎರಡು ವಿಶೇಷ ಚೇತನ ಮಕ್ಕಳು ಜನಿಸಿದರೆ ಅವರ ಪರಿಸ್ಥಿತಿ ಹೇಳುವುದೇ ಬೇಡ ಅಷ್ಟೊಂದು ಕಷ್ಟವನ್ನು ಅನುಭವಿಸ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪೋಷಕರಿಗೆ ಕುಟುಂಬದವರ, ನೆರೆ ಮನೆಯವರ, ಸಮುದಾಯದವರ ಸಹಕಾರ ಅಗತ್ಯವಾಗಿರುತ್ತದೆ. ವೈದ್ಯರು, ವಿಕಲಚೇತನರ ಕಲ್ಯಾಣಾಧಿಕಾರಿಗಳು, ವಿಶೇಷ ಶಾಲಾ ಮುಖ್ಯಸ್ಥರು, ವಿಶೇಷ ಶಿಕ್ಷಕರು, ವಿಕಲಚೇತನರ ಪುನರ್ವಸತಿ ಕಾರ್ಯಕರ್ತರು ಮುಂತಾದವರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು.
ಪೋಷಕರು ಮೂಢನಂಬಿಕೆಗೆ ಒಳಗಾಗಿ ಹಣವನ್ನು ಕಳೆದುಕೊಳ್ಳಬೇಡಿ ಮಗುವಿನ ವಿಕಲತೆಗೆ ಸಂಬಂಧಿಸಿದ ವೈದ್ಯರನ್ನು ಭೇಟಿಯಾಗಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.
ವಿಕಲಚೇತನರ ಹಕ್ಕುಗಳ ಕಾಯ್ದೆ 2016
(21 ಬಗೆಯ ವಿಕಲಚೇತನರು)

1. ದೃಷ್ಟಿದೋಷ
2. ಮಂದದೃಷ್ಟಿ
3. ಕುಷ್ಟರೋಗದಿಂದ ಗುಣವಾಗಿರುವವರು
4. ಶ್ರವಣದೋಷ
5. ದೈಹಿಕ ಅಂಗವಿಕಲತೆ
6. ಕುಬ್ಜತೆ
7. ಬೌದ್ಧಿಕ ವಿಕಲತೆ
8. ಮಾನಸಿಕ ಅಸ್ವಸ್ಥತೆ
9. ಆಟಿಸಂ ಸ್ಪೆಕ್ಟ್ರಂಡಿಸಾರ್ಡರ್
10. ಮೆದುಳುವಾತ
11. ಮಸ್ಕ್ಯುಲರ್‍ಡಿಸ್‍ಟ್ರೋಪಿ
12. ಕ್ರೋನಿಕ್ ನ್ಯೂರೊಲೊಜಿಕಲ್‍ಕಂಡಿಷನ್
13. ನಿರ್ದಿಷ್ಟ ಕಲಿಕಾ ನ್ಯೂನ್ಯತೆ
14. ಮಲ್ಟಿಪಲ್ ಸ್ಕ್ಲೀರೋಸಿಸ್
15. ಮಾತು ಮತ್ತು ಭಾಷೆಯ ವಿಕಲತೆ
16. ತ್ಯಾಲೆಸೀಮಿಯ
17. ಹೀಮೋಫಿಲಿಯ
18. ಸಿಕ್ಲ್‍ಸೆಲ್ ಎನೀಮಿಯ
19. ಬಹುವಿಧ ಅಂಗವಿಕಲತೆ
20. ಆಸಿಡ್ ದಾಳಿಗೆ ತುತ್ತಾದವರು
21. ಪಾರ್ಕಿನ್ಸನ್ ಕಾಯಿಲೆ
ವಿಕಲಚೇತನರು ಯಾರಿಗಿಂತ ಕಡಿಮೆ ಇಲ.್ಲ ಅನೇಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅಂಗವೈಕಲ್ಯವಿದ್ದರು ಸಾಧನೆಯ ಶಿಖರವೇರಿದ ಸ್ಪೂರ್ತಿದಾಯಕ ಪ್ರಸಿದ್ಧ ವ್ಯಕ್ತಿಗಳು ಸ್ಟೀಫನ್ ಹಾಕಿಂಗ್ ವಿಶ್ವ ಪ್ರಸಿದ್ಧ ಇಂಗ್ಲೀಷ್ ಭೌತಶಾಸ್ತ್ರಜ್ಞ ಮತ್ತು ಲೇಖಕ, ನಿಕೋಲಸ್ ಜೇಮ್ಸ್ ಆಸ್ಟ್ರೇಲಿಯಾದ ಪ್ರೇರಕ ಭಾಷಣಕಾರ, ಪ್ರಾಂಕ್ಲಿನ್ ಡಿ ರೂಸ್ವೇಲ್ಟ್ ಅಮೇರಿಕದ ವಕೀಲ, ರಾಜಕಾರಣಿ ಮತ್ತು ಯುನೈಟೆಡ್ ಸ್ಟೇಟ್‍ನ 32ನೇ ಅಧ್ಯಕ್ಷರಾಗಿದ್ದರು, ಲೂಯಿ ಬ್ರೈಲ್ ಅಂಧ ಮಕ್ಕಳ ಶಿಕ್ಷಣಕ್ಕೆ ಬ್ರೈಲ್‍ಲಿಪಿಯನ್ನು ಕಂಡುಹಿಡಿದು ಅಂಧರ ಬಾಳಿನ ಬೆಳಕಾದರು, ಹೆಲನ್ ಕೆಲ್ಲರ್ ದೃಷ್ಟಿದೋಷ ಮತ್ತು ಶ್ರವಣದೋಷ (ಬಹುವಿಧ ನ್ಯೂನ್ಯತೆ) ಉಳ್ಳವರಾಗಿದ್ದು, ಅನೇಕ ಗ್ರಂಥಗಳು ಮತ್ತು ಲೇಖನಗಳನ್ನು ರಚಿಸಿದ ಪ್ರಖ್ಯಾತ ಬರಹಗಾರ್ತಿ, ಪಂಡಿತ್ ಪಂಚಾಕ್ಷರಿ ಗವಾಯಿಗಳು ಸಂಗೀತ ಕ್ಷೇತ್ರದಲ್ಲಿ ವಿದ್ವಾನ್ ಅಂಧತ್ವವನ್ನು ಲೆಕ್ಕಿಸದೆ ಸಂಗೀತವನ್ನೇ ಸಾಧನವಾಗಿಸಿಕೊಂಡು ಅಸಂಖ್ಯ ಅಂಧ ಮಕ್ಕಳಿಗೆ ಬೆಳಕಾದರು. ಗಾನಯೋಗಿ ಕವಿ ಶಿರೋಮಣಿ – ಪುಟ್ಟರಾಜ ಗವಾಯಿ ಸಂಗೀತ ಕ್ಷೇತ್ರದಲ್ಲಿ ವಿದ್ವಾನ್, ಡಾ|| ಪರಮೇಶ್ವರ್ ಅಂಧ ವೈದ್ಯರಾಗಿದ್ದರು, ಶ್ರೀ ಬಸವಾನಂದ ಸ್ವಾಮೀಜಿ, ಧಾರವಾಡ, ಸುಹಾಸ್ ಯತಿರಾಜ್ ಐ.ಎ.ಎಸ್ ಅಧಿಕಾರಿಯು 2021ರ ಪ್ಯಾರ ಒಲಂಪಿಕ್‍ನಲ್ಲಿ ಪುರುಷರ ಬ್ಯಾಡ್ಮಿಂಟನ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿರುತ್ತಾರೆ. ಪ್ರಾಂಜಲ್ ಪಾಟೀಲ್ ದೇಶದ ಮೊದಲ ಅಂಧ ಐಎಎಸ್ ಅಧಿಕಾರಿ, ಅಂಧತ್ವಕ್ಕೆ ಸವಾಲು ಹಾಕಿ ಯಶಸ್ಸುಗಳಿಸಿದ ಕೆಂಪ ಹೊನ್ನಯ್ಯ ಐಎಎಸ್ ಅಧಿಕಾರಿ. ಶೇಖರ್ ನಾಯಕ್ ಭಾರತದ ಅಂಧರ ಕ್ರಿಕೆಟ್ ತಂಡದ ನಾಯಕರಾದವರು. ಮಧು ಸಿಂಘಾಲ್ ಮಿತ್ರಜ್ಯೋತಿ ಸಂಸ್ಥೆಯನ್ನು ಸ್ಥಾಪಿಸಿ ಅಂಧರ ಬಾಳಿಗೆ ದಾರಿದೀಪರಾದವರು, ಅಶ್ವಿನಿ ಅಂಗಡಿ ವಿಶೇಷ ಚೇತನರ ಹಕ್ಕುಗಳ ರಾಯಭಾರಿ, ಅಂಧರಾಗಿದ್ದರೂ ತನ್ನಂತಹ ವಿಕಲಚೇತನರ ಬಾಳಿಗೆ ಬೆಳಕಾಗುವ ಸದುದ್ದೇಶದಿಂದ “ಬೆಳಕು ಅಕಾಡೆಮಿ” ಸ್ಥಾಪಿಸಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಪ್ರೊ.ಬಾಲಾಜಿ, ಪ್ರೊ.ಕೃಷ್ಣ ಹೊಂಬಾ¼,É ಡಾ|| ಮಾಲತಿ ಕೆ. ಹೊಳ್ಳ 300ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ. ಅವುಗಳಲ್ಲಿ ಪ್ಯಾರಾ ಒಲಂಪಿಕ್ಸ್ ಕೂಡ ಒಂದು. ಅರಣಿಮಾ ಸಿಂಹ ಎವೆರಸ್ಟ್ ಶಿಖರವನ್ನೇರಿದ ಮೊದಲ ವಿಕಲಚೇತನ ಮಹಿಳೆ, ಸುಧಾ ಚಂದ್ರನ್ ಭಾರತೀಯ ನರ್ತಕಿ ದೂರದರ್ಶನ ಮತ್ತು ಚಲನ ಚಿತ್ರೋದ್ಯಮದಲ್ಲಿ ಪ್ರಸಿದ್ಧಿ ಪಡೆದವರು. ಇನ್ನು ಅನೇಕ ವಿಕಲಚೇತನರು ವಿಕಲಚೇತನರಾಗಿದ್ದುಕೊಂಡೆ ಸಾಧನೆ ಮಾಡಿದ ಸಾಧಕರು ಹಾಗೂ
ಸ್ಫೂರ್ತಿದಾಯಕರು.

ವಿಕಲಚೇತನರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು :-
1. ವಿಕಲಚೇತನರ ಗುರುತಿನ ಚೀಟಿ, ವಿಶಿಷ್ಟ ಗುರುತಿನUDID(UNIQUE  DISABILITY ID) ಶೇ 40% ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ವಿಕಲಚೇತನರಿಗೆ ಗುರುತಿನ ಚೀಟಿಯನ್ನು ನೀಡಲಾಗುತ್ತದೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಗುರುತಿನ ಚೀಟಿಯನ್ನು ಪಡೆದುಕೊಳ್ಳತಕ್ಕದ್ದು.
2. ಶೈಕ್ಷಣಿಕಯೋಜನೆ :- ಅಂಧ ಮಕ್ಕಳಿಗಾಗಿ ಸರ್ಕಾರಿ ವಸತಿಯುತ ಶಾಲೆಗಳು, ಶ್ರವಣದೋಷವುಳ್ಳ ಮಕ್ಕಳಿಗಾಗಿ ಸರ್ಕಾರಿ ವಸತಿಯುತ ಶಾಲೆಗಳು, 1982 ಅನುದಾನದಲ್ಲಿ ನಡೆಸುತ್ತಿರುವ ವಿಶೇಷ ಶಾಲೆಗಳು, ಶಿಶುಕೇಂದ್ರಿತ ಯೋಜನೆಯ ವಿಶೇಷ ಶಾಲೆಗಳು, ವಿಶೇಷ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರಗಳು, ಕೊಡಗು ಜಿಲ್ಲೆಯಲ್ಲಿ ಅಪರ್ಚುನಿಟಿ ಶಾಲೆ, ಕೊಡಗು ವಿದ್ಯಾಲಯ ಮಡಿಕೇರಿ, ಸ್ವಸ್ಥವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರ ಸುಂಟಿಕೊಪ್ಪ, ಚೆಶ್ಯರ್ ಹೋಮ್ಸ್ ಇಂಡಿಯಾ ಕೂರ್ಗ್ ವಿಶೇಷ ಶಾಲೆ ಪಾಲಿಬೆಟ್ಟ, ಅಮೃತವಾಣಿ ಶ್ರವಣ ದೋಷವುಳ್ಳ ಮಕ್ಕಳ ವಸತಿಯುತ ವಿಶೇಷ ಶಾಲೆ ದೇವರಪುರತಿ ತಿಮತಿ.
3. ಮಾಸಾಶನ/ ಪೋಷಣಾ ಭತ್ಯೆ
4. ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
5. ಉನ್ನತ ಶಿಕ್ಷಣ ಪಡೆಯುವ ವಿಕÀಲಚೇತನರಿಗೆ ಶುಲ್ಕ ಮರುಪಾವತಿ
6. ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ
7. ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‍ಟಾಪ್
8. ಸಾಧನ ಸಲಕರಣೆಗಳು
9. ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರವಾಹನ
10. ಸ್ವಯಂ ಉದ್ಯೋಗಕ್ಕಾಗಿ ಆಧಾರ ಯೋಜನೆ
11. ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ
12. ನಿರಾಮಯ ಆರೋಗ್ಯ ವಿಮೆ ಯೋಜನೆ
13. ಬುದ್ದಿಮಾಂದ್ಯ ಮಕ್ಕಳ ತಂದೆ, ತಾಯಿ/ಪೋಷಕರ ವಿಮಾಯೋಜನೆ
14. ಗ್ರಾಮೀಣ ಭಾಗದ ಅಂಗವಿಕಲರಿಗೆ ನರೇಗಾ ದಡಿಜಾಬ್‍ಕಾರ್ಡ್ ನೀಡುವ ಮೂಲಕ ಅವರಿಂದ ಸಾಧ್ಯವಾಗಬಹುದಾದ ಕಾರ್ಯಗಳನ್ನು ಮಾಡಿಸಲಾಗುವುದು.
15. ವಿಕಲಚೇತನರಿಗೆಒಖW (ವಿವಿಧೋದ್ದೇಶ ಪುನರ್ವಸತಿಕಾರ್ಯಕರ್ತರು)
ಗಿಖW(ಗ್ರಾಮೀಣ ಪುನರ್ವಸತಿಕಾರ್ಯಕರ್ತರು) ಹುದ್ದೆ.
16. ವಿವಾಹ ಪ್ರೋತ್ಸಾಹಧನ ಯೋಜನೆ
17. ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳಿಗೆ ಶಿಶು ಪಾಲನಾ ಭತ್ಯೆ
18. ಸ್ಪರ್ಧಾಚೇತನ
19. ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ
20. ಸಾಧನೆ ಮತ್ತು ಪ್ರತಿಭೆ
21. ಬಸ್‍ಪಾಸ್/ರೈಲ್ವೆ ಪಾಸ್
ಪ್ರೇಕ್ಷಣೀಯ ಸ್ಥಳಗಳು :-
ತಾಜ್ ಮಹಲ್, ಕೆಂಪುಕೋಟೆ, ಅರಮನೆ, ಮೃಗಾಲಯ, ಮೈಸೂರು ಬೃಂದಾವನ ಇತ್ಯಾದಿ ಪ್ರೇಕ್ಷಣೀಯ ಸ್ಥಳಗಳನ್ನು ವಿಕಲಚೇತನರಿಗೆ ಉಚಿತವಾಗಿ ವೀಕ್ಷಿಸಲು ಅವಕಾಶವಿದೆ.

ವಿಕಲಚೇತನರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳ ಸದುಪಯೋಗ ಪಡೆದು ಮುಂದೆ ಬರಬೇಕು. ವಿಕಲಚೇತನರ ಪುನಶ್ಚೇತನಕ್ಕೆ ಶೇ. 5ರಷ್ಟು ಅನುದಾನವನ್ನು ಮೀಸಲಿಡಬೇಕು ಹಾಗೂ ಮೀಸಲಿಟ್ಟ ಅನುದಾನ ಬಳಕೆಯಾಗಬೇಕು. ವಿಕಲಚೇತನ ಪುನರ್ವಸತಿ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ ಎಲ್ಲಾ ಇಲಾಖೆಯವರು ಕೈ ಜೋಡಿಸಿ ವಿಕಲಚೇತರನ್ನು ಮುಖ್ಯವಾಹಿನಿಗೆ ತರುವುದರ ಮೂಲಕ ಸಹಕಾರವನ್ನು ನೀಡಬೇಕಾಗುತ್ತದೆ.
ಕೊಡಗಿನಲ್ಲಿ ವಿಕಲಚೇತನರಿಗೆ ವಿಕಲಚೇತನರ ಭವನ (ಸಮುದಾಯ ಭವನ) ಅಗತ್ಯವಿದೆ. ಜಿಲ್ಲಾ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲು, ವಿಕಲಚೇತನರ ಕುರಿತಂತೆ ಜಾಗೃತಿ ಕಾರ್ಯಕ್ರಮ, ಸಾಧನ-ಸಲಕರಣೆಗಳ ಶಿಬಿರ, ಆರೋಗ್ಯ ಶಿಬಿರ, ಹಿರಿಯನಾಗರಿಕರ ದಿನಾಚರಣೆ, ವಿಕಲಚೇತನರಿಗೆ ಕಾನೂನಿನ ಅರಿವು ಮತ್ತು ನೆರವು ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವುದು.
“ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ಕೊಡಿ” ವಿಕಲಚೇತನರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ ಅವರು ಸಮಾಜದ ಮುಖ್ಯ ವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಮಾಹಿತಿ ತಂತ್ರಜ್ಞಾನ, ಮನೊರಂಜನೆ ಮುಂತಾದ ಕ್ಷೇತ್ರಗಳಲ್ಲಿ ಗುರುತಿಸಬಲ್ಲರು ಹಾಗೂ ವಿಶೇಷವಾದ ಸಾಧನೆಯನ್ನು ಮಾಡಬಲ್ಲರು. ವಿಕಲಚೇತನರಿಗೆ ಶಿಕ್ಷಣ, ತರಬೇತಿ, ಸೂಕ್ತ ಪ್ರೋತ್ಸಾಹವನ್ನು ನೀಡಿದರೆ ಉನ್ನತ ಮಟ್ಟದಲ್ಲಿ ಬೆಳೆಯುತ್ತಾರೆ. ವಿಕಲಚೇತನರ ಸಾಧನೆ ಸಾಮಥ್ರ್ಯವನ್ನು ಗುರುತಿಸಲು ಗೌರವಿಸಲು ಡಿಸೆಂಬರ್ 3 ಒಂದು ವೇದಿಕೆಯಾಗಿರುವುದು. ಡಿಸೆಂಬರ್ 3 ಜಗತ್ತಿನೆಲೆಡೆ ವಿಶ್ವ ವಿಕಲಚೇತನರ ದಿನವನ್ನಾಗಿ ಆಚರಿಸಲಾಗುತ್ತದೆ. ಎಲ್ಲಾ ವಿಕಲಚೇತನರಿಗೂ“ವಿಶ್ವ ವಿಕಲಚೇತನರ ದಿನಾಚರಣೆಯ ಶುಭಾಷಯಗಳು”
ಮಾಹಿತಿಗಾಗಿ :-
ವಿಕಲಚೇತನರ ಕಲ್ಯಾಣಾಧಿಕಾರಿಗಳು,
ವಿಕಲಚೇತನರ ಹಾಗೂ ಹಿರಿಯ ನಾಗರಿಕರ,
ಸಬಲೀಕರಣ ಇಲಾಖೆ,
ಮಡಿಕೇರಿ.
ಕಛೇರಿದೂರವಾಣಿ :08272 – 295829

ಬರಹ : ಶಿವರಾಜ್ ಎಸ್.ಸಿ
ವಿಶೇಷ ಶಿಕ್ಷಕರು,
ಪಾಲಿಬೆಟ್ಟ, ಕೊಡಗು.