ಬಾಡಗ ಬಾಣಂಗಾಲ : ಬಡ ಕುಟುಂಬಕ್ಕೆ ಮನೆ ಹಸ್ತಾಂತರಕ್ಕೆ ಸಿದ್ಧತೆ

03/12/2021

ಮಡಿಕೇರಿ ಡಿ.3 : ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಿತಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೊಡಗಿನ ಬಡವರ ಬೆಳಕು ಚಾರಿಟೆಬಲ್ ಟ್ರಸ್ಟ್ ನ ಪದಾಧಿಕಾರಿಗಳು
ಮನೆ ಇಲ್ಲದೆ ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ಡಿ.5 ರಂದು ಮನೆ ಹಸ್ತಾಂತರಿಸಲಿದೆ.
ಮಾಲ್ದಾರೆ ಸಮೀಪದ ಬಾಡಗ ಬಾಣಂಗಾಲ ಕಾಡಂಗಡಿ ಗ್ರಾಮದಲ್ಲಿ ಸಂತ್ರಸ್ತ ಕುಟುಂಬವೊಂದು ಸ್ವಂತ ಸೂರಿಲ್ಲದೆ ಸಂಕಷ್ಟ ಎದುರಿಸುತ್ತಿರುವುದನ್ನು ಕಂಡಟ್ರಸ್ಟ್ ನ ಪದಾಧಿಕಾರಿಗಳು
ಬಡಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು.
ನುಡಿದಂತೆ ನಡೆದ ಟ್ರಸ್ಟ್ ಇದೀಗ ಸುಸಜ್ಜಿತ ಮನೆ ನಿರ್ಮಿಸಿ ಕೊಡುವ ಮೂಲಕ ಮಾನವೀಯತೆ ತೋರುವ ಟ್ರಸ್ಟಿಗೆ ಸ್ಥಳೀಯರು ಅಭಿನಂದಿಸಿದ್ದಾರೆ.
ಕೊಡಗಿನ ಬಡವರ ಬೆಳಕು ಟ್ರಸ್ಟ್ ನ ಜಿಲ್ಲಾಧ್ಯಕ್ಷ ಎಂ. ಎಚ್ ಮೊಹಮ್ಮದ್ ಪತ್ರಿಕೆಯೊಂದಿಗೆ ಮಾತನಾಡಿದ ಕಳೆದ 5 ವರ್ಷಗಳಿಂದ ಸಂಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜಾತಿ ಮತ ಭೇದವಿಲ್ಲದೆ ಆರೋಗ್ಯ, ಶಿಕ್ಷಣ,ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯ ಸೇರಿದಂತೆ ಮಳೆ, ಪ್ರವಾಹ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರ ಸಂತ್ರಸ್ತರಿಗೆ ಧನಸಹಾಯ ಹಾಗೂ ಕಿಟ್ ಗಳನ್ನು ನೀಡುವ ಮೂಲಕ ಸ್ಪಂದಿಸಿದ್ದು ಕಳೆದ ಸಾಲಿನಲ್ಲಿ ವಿರಾಜಪೇಟೆ ಸಮೀಪದ ಗುಂಡಿಗೆರೆಯ ವಿಶೇಷಚೇತನ ವ್ಯಕ್ತಿಯೊಬ್ಬರಿಗೆ ಹತ್ತು ಲಕ್ಷರೂ ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಲಾಗಿದೆ.
ಮಾಲ್ದಾರೆ ಸಮೀಪದ ಕುಟುಂಬವೊಂದು ಸ್ವಂತ ಸೂರಿಲ್ಲದೆ ಸಂಕಷ್ಟದಲ್ಲಿದ್ದ ಬಡ ಮಹಿಳೆಗೆ ಮನೆ ನಿರ್ಮಿಸಿಲಾಗಿದ್ದು ಭಾನುವಾರದಂದು ಹಸ್ತಾಂತರ ಮಾಡಲಿರುವುದಾಗಿ ತಿಳಿಸಿದರು.