ಕೊಡಗಿನ ಸಮಾಜ ಸೇವಕರಿಗೆ ಪ್ರಶಸ್ತಿ

03/12/2021

ಮಡಿಕೇರಿ ಡಿ.3 : ಬೆಂಗಳೂರಿನ ಆಟೋರಾಜ ಫೌಂಡೇಶನ್ ವತಿಯಿಂದ ಕೊಡಗಿನ ಸಮಾಜ ಸೇವಕರಾದ ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಹಾಗೂ ಸುಂಟಿಕೊಪ್ಪ ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮದ ಅಧ್ಯಕ್ಷ ರಮೇಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಹೆಬ್ಬಾಳದ ಮೆರಿಟ್ ಹೊಟೇಲ್ ನಲ್ಲಿ ಆಟೋರಾಜ ಫೌಂಡೇಶನ್ ನ ಅಧ್ಯಕ್ಷ ಆಟೋರಾಜ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಲಿಂಬಾವಳಿ ಪ್ರಶಸ್ತಿ ವಿತರಿಸಿದರು.