ಪರವಾನಗಿ ಭೂಮಾಪಕರಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

04/12/2021

ಮಡಿಕೇರಿ ಡಿ.4 : ಭೂದಾಖಲೆಗಳ ಇಲಾಖೆಯಲ್ಲಿ ಪರವಾನಗಿ ಭೂಮಾಪಕರಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ 100 ಮಂದಿ ಪರವಾನಗಿ ಭೂಮಾಪಕರಿಗೆ ಅವಕಾಶವಿದ್ದು, 2013 ರ ಅಕ್ಟೋಬರ್, 21 ರಲ್ಲಿ ನಿಗಧಿಪಡಿಸಿರುವಂತೆ ಪ್ರತೀ ಅಳತೆಯ ಕಾರ್ಯಕ್ಕೆ ಭೂದಾಖಲೆಗಳ ಇಲಾಖೆಯಿಂದ ಸೇವಾ ಶುಲ್ಕ ನೀಡಲಾಗುತ್ತದೆ.
ಪರವಾನಗಿ ನೀಡಲಾದ ಭೂಮಾಪಕರಿಗೆ ನಿಗದಿಪಡಿಸಿರುವಂತೆ ಪ್ರತಿ ಅಳತೆ ಕಾರ್ಯಕ್ಕೆ ಇಲಾಖೆಯಿಂದ ಸೇವಾ ಶುಲ್ಕವನ್ನು ನೀಡಲಾಗುವುದು. ಭೂಮಾಪಕನ ಕೆಲಸ ನಿರ್ವಹಿಸಲು ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಮೊದಲು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಿರ್ಧಿಷ್ಟಪಡಿಸಿದ ಜಿಲ್ಲಾ ಕೇಂದ್ರಗಳಲ್ಲಿ 2022 ರ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ನಡೆಸಲು ಉದ್ದೇಶಿಸಿದೆ.
ಪರೀಕ್ಷೆಯ ಖಚಿತ ದಿನಾಂಕವನ್ನು ವೆಬ್‍ಸೈಟ್ ವಿಳಾಸವಾದrdservices.karnataka.gov.in ರಲ್ಲಿ ಮತ್ತು ಮುಂಚಿತವಾಗಿ ಪ್ರಚುರಪಡಿಸಲಾಗುವುದು, ನಿಗದಿಪಡಿಸಲಾದ ಅರ್ಜಿಗಳನ್ನು ಸಲ್ಲಿಸಲು ಲಿಂಕ್ ನ್ನು ಮೇಲೆ ತಿಳಿಸಿರುವ ಇಲಾಖಾ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗಿದೆ. ಅರ್ಜಿಗಳನ್ನು ಆನ್‍ಲೈನ್ ಮುಖಾಂತರ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿಯು ಆನ್‍ಲೈನ್‍ನಲ್ಲಿ ಒಂದು ಅರ್ಜಿ ಸಲ್ಲಿಸುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಪೂರ್ಣ ಅಥವಾ ನಿಯಮಗಳನ್ನು ಪಾಲಿಸದ ಅರ್ಜಿಗಳನ್ನು ಯಾವುದೇ ಮುನ್ಸೂಚನ ಇಲ್ಲದೆ ತಿರಸ್ಕರಿಸಲಾಗುವುದು.
ಆನ್‍ಲೈನ್ ಮೂಲಕ ಅರ್ಜಿಯನ್ನು at rdservices.karnataka.gov.in ನಲ್ಲಿ ಡಿಸೆಂಬರ್, 31 ರ ಸಂಜೆ 5 ಗಂಟೆ ಒಳಗೆ ಸಲ್ಲಿಸಬೇಕು.
ಶೈಕ್ಷಣಿಕ ವಿದ್ಯಾರ್ಹತೆ; ಕನಿಷ್ಟ ಪದವಿ ಪೂರ್ವ ಶಿಕ್ಷಣ (ಪಿಯುಸಿ.) ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಜರುಗಿಸುವ 12 ನೇ ತರಗತಿ ಸಿಬಿಎಸ್‍ಇ. ಅಥವಾ ಐಸಿಎಸ್‍ಇ. ಇವುಗಳಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ ಶೇ.60 ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು ಅಥವಾ ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಇ(ಸಿವಿಲ್) ಅಥವಾ ಬಿ.ಟೆಕ್(ಸಿವಿಲ್) ಅಥವಾ ಸಿಎಲ್ ಎಂಜಿನಿಯರಿಂಗ್ ಡಿಪೆÇ್ಲೀಮಾದಲ್ಲಿ ಉತ್ತೀರ್ಣರಾಗಿರುವವರೂ ಸಹ ಅರ್ಜಿ ಸಲ್ಲಿಸಬಹುದು. ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ಲ್ಯಾಂಡ್ ಅಂಡ್ ಸಿಟಿ ಸರ್ವೆ ಯಲ್ಲಿ ಪದವಿ ಪೂರ್ವ ಡಿಪೆÇ್ಲೀಮಾದಲ್ಲಿ ಉತ್ತೀರ್ಣರಾಗಿರಬೇಕು.
ಕರ್ನಾಟಕ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐಟಿಐ. ಇನ್ ಸರ್ವೆ ಟ್ರೇಡ್‍ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ರಾಜ್ಯ ಸರ್ಕಾರದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಅಥವಾ ಸರ್ವೆ ಆಫ್ ಇಂಡಿಯಾ ಅಥವಾ ಸರ್ಕಾರಿ ವಲಯಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷಗಳ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಗಿ ಪಡೆಯಲು ಅರ್ಹರಿರುತ್ತಾರೆ.
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರತಕ್ಕದ್ದು. ಗರಿಷ್ಠ ವಯೋಮಿತಿ 65 ವರ್ಷಗಳು ಮೀರಿರಬಾರದು.
ಅಭ್ಯರ್ಥಿಗಳ ಜನ್ಮ ದಿನಾಂಕವನ್ನು ಅವರ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರ (ಟಿಸಿ), ಕ್ಯುಮುಲೇಟಿವ್ ರೆಕಾರ್ಡ್‍ನಲ್ಲಿ ನಮೂದಿಸಿರುವಂತೆ ಪರಿಗಣಿಸಲಾಗುವುದು. ಇವುಗಳನ್ನು ಹೊರತುಪಡಿಸಿ ಇತರೆ ಯಾವುದೇ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು, ಭೂದಾಖಲೆಗಳ ಇಲಾಖೆ, ಎರಡನೇ ಮಹಡಿ, ಜಿಲ್ಲಾಡಳಿತ ಭವನ, ಮಡಿಕೇರಿ ಕೊಡಗು ಜಿಲ್ಲೆ ಕಚೇರಿ ಸಂಪರ್ಕಿಸಬಹುದು.