ಸುಂಟಿಕೊಪ್ಪ : ಧರ್ಮ ದೈವಗಳ ನೇಮೋತ್ಸವ

06/12/2021

ಸುಂಟಿಕೊಪ್ಪ ಡಿ.6 : ನಾಕೂರು ಶಿರಂಗಾಲ ಗ್ರಾಮದ ಮಂಜಿಕೆರೆ ರಮೇಶ್ ರೈ ಅವರ ಮನೆಯಲ್ಲಿ ಧರ್ಮದೈವಗಳ ಹರಕೆ ನೇಮೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಬೆಳಗ್ಗೆ ಭಂಡಾರ ತೆಗೆಯಲಾಯಿತು, ರಾತ್ರಿ ಪ್ರಮುಖ ಧರ್ಮಶಕ್ತಿ ದೈವಗಳಾದ ಪಾಷಾಣಮೂರ್ತಿ, ಗುಳಿಗ ದೈವಗಳ ಕೋಲಗಳು ಹಾಗೂ ಕೊರಗಜ್ಜನ ನೇಮ ನಡೆಯಿತು. ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮುಖ್ಯಸ್ಥರಾದ ರಮೇಶ್ ರೈ ನೇತೃತ್ವದಲ್ಲಿ ನಡೆದ ನೇಮೋತ್ಸವದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.