ಸೋಮವಾರಪೇಟೆ : ಹಿಂದೂ ಜಾಗರಣಾ ವೇದಿಕೆಯಿಂದ ವಿಶೇಷ ಪೂಜೆ

06/12/2021

ಮಡಿಕೇರಿ ಡಿ.6 : ಅಯೋಧ್ಯೆಯಲ್ಲಿ ನಡೆದ ಕರಸೇವೆ ದಿನದ ಹಿನ್ನೆಲೆ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಪಟ್ಟಣದ ಕರಸೇವಕರು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಕರಸೇವಕರಾದ ಎಸ್.ಪಿ. ಪೊನ್ನಪ್ಪ, ಮಸಗೋಡು ಸುರೇಶ್, ಕಲ್ಕಂದೂರು ಅಪ್ಪಯ್ಯ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸುಭಾಷ್ ತಿಮ್ಮಯ್ಯ, ಜಿಲ್ಲಾ ಸಹ ಸಂಪರ್ಕ ಪ್ರಮುಖ್ ಎಂ.ಬಿ. ಉಮೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಬೋಜೇಗೌಡ, ಜಿ.ಎ. ಉದಯ, ಎಂ.ಸಿ. ರಾಘವ ಸೇರಿದಂತೆ ಪದಾಧಿಕಾರಿಗಳು ಇದ್ದರು.