ಸೋಮವಾರಪೇಟೆ : ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 65ನೇ ಪರಿನಿರ್ವಣಾ ಕಾರ್ಯಕ್ರಮ

06/12/2021

ಸೋಮವಾರಪೇಟೆ ಡಿ.6 : ಬಹುಜನ ಸಮಾಜ ಪಕ್ಷ ಜಿಲ್ಲಾ ಸಮಿತಿ ವತಿಯಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 65ನೇ ಪರಿನಿರ್ವಣಾ ಕಾರ್ಯಕ್ರಮ ಪತ್ರಿಕಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಕ್ಷದ ಜಿಲ್ಲಾಧ್ಯಕ್ಷ ಸಿದ್ದಪ್ಪ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರು ತಮ್ಮ ಜೀವಿತದುದ್ದಕ್ಕೂ ನೋವು, ಅವಮಾನಗಳನ್ನು ಅನುಭವಿಸಿದರೂ ಉನ್ನತ ಶಿಕ್ಷಣ ಪಡೆಯುವ ಮೂಲಕ ವಿಶ್ವಜ್ಞಾನಿಯಾಗಿದ್ದಾರೆ. ಈ ದೇಶದ ಜನರಿಗೆ ಮತದಾನದ ಹಕ್ಕು, ಸ್ವಾತಂತ್ರ್ಯದ ನಂತರ ಸಂವಿಧಾನ ರಚಿಸುವ ಜವಾಬ್ದಾರಿ ಹೊತ್ತುಕೊಂಡು ಎಲ್ಲಾ ಜನರಿಗೆ ಸ್ವಾತಂತ್ರ್ಯ ಸಮಾನತೆ, ಸೋದರತೆ, ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕುಗಳನ್ನು ದೊರಕಿಸಿಕೊಡುವ ಮೂಲಕ ಮಹಾಮಾನವತಾ ವಾದಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ಬಿ.ಸಿ.ರಾಜು, ಗೋವಿಂದರಾಜು, ಎಸ್.ಕೆ.ಅಮಿತ್, ಕೆ.ಕೆ.ಕಾಳಪ್ಪ, ಬಾಬು, ದಿನೇಶ್, ಎಚ್.ಈ.ಸಣ್ಣಪ್ಪ, ಜಯಪ್ಪ ಹಾನಗಲ್, ಎಚ್.ಪಿ.ಮಂಜುನಾಥ್, ನಾಗರಾಜ್, ಸುಶೀಲ ಹಾನಗಲ್ ಇದ್ದರು.