ತುಳುವೆರ ಜನಪದ ಕೂಟದ ಸಭೆ : ಪೊನ್ನಂಪೇಟೆ ತಾಲ್ಲೂಕು ಸಮಿತಿಗೆ ಪದಾಧಿಕಾರಿಗಳ ಆಯ್ಕೆ

07/12/2021

ಮಡಿಕೇರಿ ಡಿ.7 : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಪೊನ್ನಂಪೇಟೆ ತಾಲ್ಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೋಣಿಕೊಪ್ಪದ ಕಾವೇರಿ ಮಹಿಳಾ ಸಮಾಜದಲ್ಲಿ ನಡೆದ ತುಳುವೆರ ಜನಪದ ಕೂಟದ ಸಭೆಯಲ್ಲಿ ತಾಲ್ಲೂಕು ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೊನ್ನಂಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಕೆ.ಜಿ.ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಆರ್.ವಿಜಯ, ಉಪಾಧ್ಯಕ್ಷರಾಗಿ ಪಿ.ಎಸ್.ಮಂಜುನಾಥ್, ಬಿ.ಎಸ್.ಪುರುಷೋತ್ತಮ ಹಾಗೂ ಸಂದ್ಯಾ ಗಣೇಶ್ ರೈ ನೇಮಕಗೊಂಡರು.
ಕಾರ್ಯದರ್ಶಿಯಾಗಿ ಪವಿತ್ರ ಸುಂದರ್, ಸಂಚಾಲಕರಾಗಿ ಸುರೇಶ್ ರೈ, ಸಲಹೆಗಾರರಾಗಿ ಚಂದ್ರಶೇಖರ್(ರಾಜ), ಬಿ.ಕೆ.ಮುಕುಂದ, ಡಾ.ಚಂದ್ರಶೇಖರ್, ಕೆ.ಆರ್.ಬಾಲಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತು.
ನಿರ್ದೇಶಕರಾಗಿ ಬಿ.ಎಂ.ರಾಧಕೃಷ್ಣ, ದಿನೇಶ್, ಪುಷ್ಪ, ಮಣಿ ಪೂಜಾರಿ, ಗೀತಾ, ಮಮತಾ ದಿನೇಶ್, ಜಯಕರ್, ಸುಮಿತ್ರ, ವಿಷ್ಣುಮೂರ್ತಿ ಪ್ರಕಾಶ್, ಯಮುನಾ, ಕವಿತಾ ದಿನೇಶ್, ಬಿ.ಎಸ್.ರಶ್ಮಿ, ಸುದರ್ಶನ್, ಬಿ.ಎಸ್.ಲಿಂಗಪ್ಪ ಅವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.