ಕೊಡಗು ಯುವ ಸೇನೆಯ ಕುಶಾಲನಗರ ಸಂಚಾಲಕರಾಗಿ ಬಿ.ಆರ್.ಶರಣ್ ಕುಮಾರ್ ನೇಮಕ

07/12/2021

ಮಡಿಕೇರಿ ಡಿ.7 : ಕೊಡಗು ಯುವಸೇನೆಯ ಕುಶಾಲನಗರ ತಾಲ್ಲೂಕು ಸಂಚಾಲಕರಾಗಿ ಬಿ.ಆರ್.ಶರಣ್ ಕುಮಾರ್ ಆಯ್ಕೆಯಾಗಿದ್ದಾರೆ.

ಕುಶಾಲನಗರದಲ್ಲಿ ನೃತ್ಯ ಶಿಕ್ಷಕರಾಗಿ ಯುವಸಮೂಹವನ್ನು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕಾರ್ಯವನ್ನು ಸಲ್ಲಿಸುತ್ತಿರುವ ಶರಣ್ ಅವರ ಸೇವೆಯನ್ನು ಪರಿಗಣಿಸಿ ನೇಮಕ ಮಾಡಲಾಗಿದೆ ಎಂದು ಯುವ ಸೇನೆಯ ಪ್ರಮುಖ ಕುಲದೀಪ್ ಪುಣಚ್ಚ ಹಾಗೂ ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಸಂಘಟನೆಯನ್ನು  ಬಲಪಡಿಸುವ ನಿಟ್ಟಿನಲ್ಲಿ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಪ್ರಮುಖರು ತಿಳಿಸಿದ್ದಾರೆ.