ಸುಂಟಿಕೊಪ್ಪದಲ್ಲಿ ಮಾದಕ ವ್ಯಸನಿಗಳ ಹಾವಳಿ

07/12/2021

ಮಡಿಕೇರಿ ಡಿ.7 : ಸುಂಟಿಕೊಪ್ಪದ ವಿವಿಧೆಡೆ ಗಾಂಜಾ ಸೇರಿದಂತೆ ಮಾದಕ ವ್ಯಸನಿಗಳ ಹಾವಳಿ ಮಿತಿ ಮೀರಿದ್ದು, ಶಾಲಾ ಮೈದಾನ, ನಾಡಕಛೇರಿಯ ಹಳೆಯ ಕಟ್ಟಡದ ಹಿಂಭಾಗ, ಮಾರುಕಟ್ಟೆ ಆವರಣ ಇವರುಗಳಿಗೆ ಸುರಕ್ಷಿತ ನೆಲೆಯಾಗಿದೆ. ಗಾಂಜಾ ವ್ಯವಹಾರ ರಾಜಾರೋಷವಾಗಿ ನಡೆಯುತ್ತಿದೆ, ಈ ಹಿಂದೆ ಶಾಲಾ ಕೊಠಡಿಯಲ್ಲಿದ್ದ ಪುಸ್ತಕಗಳನ್ನು ರಾತ್ರಿ ವೇಳೆ ಕಿಡಿಗೇಡಿಗಳು ಬೆಂಕಿ ಹಚ್ಚಿ ನಾಶ ಮಾಡಿದ ಘಟನೆಯೂ ನಡೆದಿತ್ತು. ಆದರೂ ಪೊಲೀಸರು ಎಚ್ಚೆತ್ತುಕೊಂಡಿಲ್ಲವೆoದು ಸಾರ್ವಜನಿಕರು ಆರೋಪಿಸಿದ್ದಾರೆ.
ಇದೀಗ ಶಾಲೆಯ ನೀರಿನ ಟ್ಯಾಂಕ್ ಗೆ ವಿಷಕಾರಿ ರಾಸಾಯನಿಕ ಬೆರೆಸಿದ್ದು, ಆತಂಕ ಮೂಡಿದೆ ಎಂದು ಗಮನ ಸೆಳೆದಿದ್ದಾರೆ.