ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಸರಳ “ಷಷ್ಠಿ” ಆಚರಣೆಗೆ ನಿರ್ಧಾರ

07/12/2021

ಮಡಿಕೇರಿ ಡಿ.7 : ಸರ್ಕಾರದ ಆದೇಶ ಸಂಖ್ಯೆ RD 158/TNR 2020 ದಿನಾಂಕ 03/12/2021 ರ ಸರ್ಕಾರದ ಮಾರ್ಗ ಸೂಚಿಯನ್ನು ಪಾಲಿಸಬೇಕಾಗಿರುವುದರಿಂದ ದಿನಾಂಕ 09/12/2021 ರಂದು ಶ್ರೀ ಓಂಕಾರೇಶ್ವರ ದೇವಾಲಯ ಮಡಿಕೇರಿ ಇಲ್ಲಿ “ಷಷ್ಠಿ” ಉತ್ಸವವನ್ನು ಸರಳವಾಗಿ ನಡೆಸಲಾಗುವುದು. ಕಾರ್ಯಕ್ರಮದಲ್ಲಿ ಅನ್ನ ಸಂತರ್ಪಣೆ ಬದಲಾಗಿ *ಪ್ರಸಾದ* ವಿನಿಯೋಗವನ್ನು ಮಧ್ಯಾಹ್ನ 1 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಆದುದರಿಂದ ಭಕ್ತರು ಸರ್ಕಾರದ ಮಾರ್ಗ ಸೂಚಿಯನ್ನು ಪಾಲಿಸಿ “ಷಷ್ಠಿ” ಕಾರ್ಯಕ್ರಮ ಯಶಸ್ವಿ ಗೊಳಿಸಬೇಕಾಗಿ ಕೋರಿಕೊಳ್ಳುತ್ತೇವೆ. *ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಓಂಕಾರೇಶ್ವರ ದೇವಾಲಯ ಮಡಿಕೇರಿ.*