ತುಳುವೆರ ಜನಪದ ಕೂಟದ ಚೇರಂಬಾಣೆ ಅಧ್ಯಕ್ಷರಾಗಿ ಎಂ.ಪಿ.ಪವನ್ ಆಯ್ಕೆ

08/12/2021

ಮಡಿಕೇರಿ ಡಿ.8 : ತುಳುವೆರ ಜನಪದ ಕೂಟದ ಚೇರಂಬಾಣೆ ಹೋಬಳಿ ಅಧ್ಯಕ್ಷರಾಗಿ ಎಂ.ಪಿ.ಪವನ್ ಕುಲಾಲ್ ಆಯ್ಕೆಯಾಗಿದ್ದಾರೆ.
ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ ಅವರ ಅಧ್ಯಕ್ಷತೆಯಲ್ಲಿ ನಗರದ ಬಾಲಭವನದಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಸಮಿತಿ ಹಾಗೂ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.