ಡಿ.9 ರಂದು ಕುಶಾಲನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

08/12/2021

ಮಡಿಕೇರಿ ಡಿ.8 : ಕುಶಾಲನಗರ 220/11 ಕೆವಿ ಉಪ ಕೇಂದ್ರದಿಂದ ಹೊರಹೋಗುವ ಕಾವೇರಿ ಮತ್ತು ಎಸ್‍ಎಲ್‍ಎನ್ ಫಿಲ್ಟರ್‍ನಲ್ಲಿ ತುರ್ತು ಕಾಮಗಾರಿ ನಿರ್ವಹಿಸಬೇಕಿರುವುದರಿಂದ ಡಿಸೆಂಬರ್, 09 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಎಸ್‍ಎಲ್‍ಎನ್ ಲೇಔಟ್ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.