ಮಡಿಕೇರಿಯಲ್ಲಿ ಕೋವಿಡ್ ವೈರಸ್ ಹಾಗೂ ಲಸಿಕೆ ಕುರಿತು ಜಾಗೃತಿ ಜಾಥ

08/12/2021

ಮಡಿಕೇರಿ ಡಿ.08 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುನಿಸೆಫ್ ಮತ್ತು ಐಐಎಚ್‍ಎಂಆರ್, ಬೆಂಗಳೂರು ಹಾಗೂ ಜನರಲ್ ಕಾರ್ಯಪ್ಪ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್-19 ವೈರಸ್ ಹಾಗೂ ಕೋವಿಡ್ ಲಸಿಕೆ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಂದ ಕೋವಿಡ್ –19 ವೈರಸ್, ಮಾಸ್ಕ್ ಮತ್ತು ಲಸಿಕೆಯ ವೇಷಭೂಷಣಗಳನ್ನು ಧರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಾಥಾ ಅಭಿಯಾನ ಕಾರ್ಯಕ್ರಮ ನಡೆಯಿತು.
ಈ ಜಾಥಾವನ್ನು ಜಿ.ಪಂ.ಸಿಇಒ ಭನ್ವರ್‍ಸಿಂಗ್ ಮೀನಾ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಆನಂದ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಗೋಪಿನಾಥ್ ಮತ್ತು ತಾಲ್ಲೂಕು ಆರೋಗ್ಯಧಿಕಾರಿ ಡಾ.ಚೇತನ್, ಜಿಲ್ಲಾ ಸಂಯೋಜಕರಾದ ಡಾ.ಬಿ.ರವೀಶ್, ಎಂಟಮಾಲಜಿಸ್ಟ್ ಮಂಜುನಾಥ್, ಎನ್‍ಸಿಡಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ.ಶಾಂಭವಿ, ಎನ್‍ಟಿಸಿಪಿ ವಿಬಾಗದ ಸಮಾಜ ಕಾರ್ಯಕರ್ತರಾದ ಆರ್.ಮಂಜುನಾಥ್, ಐಡಿಎಸ್‍ಪಿ ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ರಾಜೇಶ್ ಬೈಂದೂರು, ಜನರಲ್ ಕಾರ್ಯಪ್ಪ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಪೋಲಿಸ್ ಸಿಬ್ಬಂದಿಗಳು ಇತರರು ಇದ್ದರು.