ಉಡೋತ್ ಮೊಟ್ಟೆಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಪರಿವಾರ ದೈವಗಳ ನೇಮೋತ್ಸವ

08/12/2021

ಮಡಿಕೇರಿ ಡಿ.8 : ಉಡೋತ್ ಮೊಟ್ಟೆ ಗ್ರಾಮದಲ್ಲಿರುವ ಶ್ರೀ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಕೊರಗಜ್ಜ ಪ್ರತಿಷ್ಠಾಪನೆ ಮತ್ತು ಪರಿವಾರ ದೈವಗಳ ನೇಮೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಬೆಳಗ್ಗೆ ಭಂಡಾರ ತೆಗೆಯಲಾಯಿತು. ಎರಡು ದಿನಗಳ ನಡೆದ ನೇಮೋತ್ಸವದಲ್ಲಿ ಪರಿವಾರ ದೈವಗಳಾದ ಕಲ್ಲುರ್ಟಿ ದೈವದ ಕೋಲ, ಧರ್ಮದೈವದ ನೇಮ ಹಾಗೂ ಕೊರಗಜ್ಜ ದೈವದ ನೇಮ ನಡೆಯಿತು.
ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನೇಮೋತ್ಸವದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸಿದರು.