ಭೀಕರ ಹೆಲಿಕಾಪ್ಟರ್ ದುರಂತ : ತನಿಖೆ ನಡೆಸುವುದು ಸೂಕ್ತವೆಂದ ಮೇಜರ್ ಬಿ.ಎ.ನಂಜಪ್ಪ

08/12/2021

ಮಡಿಕೇರಿ ಡಿ.8 : ತಮಿಳುನಾಡಿನ ಕೂನೂರಿನ ನೀಲಗಿರೀಸ್ ಬೆಟ್ಟ ವ್ಯಾಪ್ತಿಯಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅವಘಡದಲ್ಲಿ ಚೀಫ್ ಆಫ್ ಡಿಫೆನ್ಸಿವ್ ಸ್ಟಾಫ್(ಸಿಡಿಎಸ್) ಬಿಪಿನ್ ರಾವತ್ ಅವರು ಕೊನೆಯುಸೆರೆಳೆದ ಘಟನೆಗೆ ಕೊಡಗಿನ ಮೇಜರ್ ಬಿ.ಎ.ನಂಜಪ್ಪ(ನಿವೃತ್ತ) ದು:ಖ ವ್ಯಕ್ತಪಡಿಸಿದ್ದಾರೆ.
ಏನೋ ನಡೆದಿರಬಹುದೆಂದು ಸಂಶಯಪಟ್ಟಿರುವ ಅವರು, ಈ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ.NEWS DESK
ಚೀಫ್ ಆಫ್ ಡಿಫೆನ್ಸಿವ್ ಸ್ಟಾಫ್(ಸಿಡಿಎಸ್) ಬಿಪಿನ್ ರಾವತ್ ಅವರು ಹಾಗೂ ಇತರರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾರತೀಯ ವಾಯುದಳದ ಹೊಚ್ಚ ಹೊಸ ಹೆಲಿಕಾಪ್ಟರ್. ಇಂತಹ ಹೆಲಿಕಾಪ್ಟರ್ ಅವಘಡಕ್ಕೆ ಒಳಗಾಗುವುದಕ್ಕೆ ಹೇಗೆ ಸಾಧ್ಯ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.NEWS DESK
ಅತ್ಯಂತ ಉನ್ನತ ಸಿಡಿಎಸ್ ಹುದ್ದೆಯನ್ನು ಅಲಂಕರಿಸಿರುವ ಬಿಪಿನ್ ರಾವತ್ ಅವರು ಒಂದು ಪ್ರದೇಶಕ್ಕೆ ತೆರಳುವುದಕ್ಕೂ ಮುನ್ನ, ಮಾರ್ಗದ ತಪಾ¸ಣೆಯ ಟ್ರಯಲ್ ರನ್‌ಗಳು ನಡೆದಿರುತ್ತವೆ. ಹೀಗಿದ್ದೂ ಇಂತಹ ದುರ್ಘಟನೆ ನಡೆದಿರುವುದು ಆಘಾತವನ್ನುಂಟು ಮಾಡಿದೆ ಎಂದು ಅತೀವ ನೋವನ್ನು ವ್ಯಕ್ತಪಡಿಸಿದರು.NEWS DESK
ಸಿಡಿಎಸ್ ಬಿಪಿನ್ ರಾವತ್ ಅವರಂತಹ ಸೇನಾ ಮುಖಂಡರು ಇಲ್ಲದಿದ್ದರೆ ಒಳ್ಳೆಯದು ಎನ್ನುವ ಭಾವನೆ ಭಾರತದ ನೆರೆಕರೆಯ ಕೆಲವು ದೇಶಗಳಿಗಿದೆ ಎಂದು ಸೂಕ್ಷ್ಮವಾಗಿ ನುಡಿದ ಮೇಜರ್ ಬಿ.ಎ.ನಂಜಪ್ಪ, ಈ ಅವಘಡದ ಹಿಂದೆ ಏನೋ ನಡೆದಿದೆ ಎನ್ನುವ ಸಂಶಯಗಳು ಮೂಡುತ್ತಿರುವುದರಿಂದ ನಿಖೆ ನಡೆಯುವುದು ಸೂಕ್ತವೆಂದು ತಿಳಿಸಿದರು.NEWS DESK