ಲವಂಗದ ಆರೋಗ್ಯಕರ ಪ್ರಯೋಜನಗಳು

18/12/2021

ಲವಂಗ ಖಾರದಿಂದ ಕೂಡಿದ ಪರಿಮಳಯುಕ್ತ ಸಾಂಬಾರ ವಸ್ತು. ಅನೇಕ ವಿಧದಲ್ಲಿ ಉಪಯುಕ್ತ. ಮೂಲತ: ಇಂಡೋನೇಷ್ಯಾದ್ದಾಗಿದ್ದು ಅಲ್ಲಿ ಈಗಲೂ ಕಾಡುಮರವಾಗಿ ಕಂಡುಬರುತ್ತದೆ. ಪೋರ್ಚುಗೀಸರು ಇದನ್ನು ಯುರೋಪಿಗೆ ಒಯ್ದರು. ಭಾರತಕ್ಕೆ ಮಾರಿಷಸ್ ಮೂಲದಿಂದ ಬಂದಿದೆ.

ಉಪಯೋಗಗಳು
ಹಲ್ಲು ನೋವಿಗೆ ಉತ್ತಮ ಔಷಧಿ. ಕೆಮ್ಮಿಗು ತೆಗೆದುಕೊಳ್ಳಬಹುದು.ಸಾಂಬಾರ್ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುವ ಲವಂಗಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಕಾರಣ ಇದನ್ನು ಆಯುರ್ವೇದ ಔಷಧ, ಟೂಥ್ ಪೌಡರ್, ಪೇಸ್ಟ್ ತಯಾರಿಕೆಯಲ್ಲಿ ಯಥೇಚ್ಛವಾಗಿ ಬಳಸುತ್ತಾರೆ. ಲವಂಗವನ್ನು ಕರ್ನಾಟಕದ ರಾಜ್ಯದ ಮಲೆನಾಡು, ಕರಾವಳಿ ಪ್ರದೇಶದಲ್ಲಿ ಬೆಳೆಯುತ್ತಾರೆ.

ಲವಂಗ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವುದು ಮಾತ್ರವಲ್ಲದೆ ನಿಮ್ಮ ದೇಹದಲ್ಲಿ ಇನ್ಸುಲಿನ್ ಪ್ರಕ್ರಿಯೆ ಹಾಗೂ ಚಟುವಟಿಕೆ ಸರಿಯಾದ ಪ್ರಮಾಣದಲ್ಲಿ ನಡೆಯುವಂತೆ ನೋಡಿಕೊಳ್ಳುತ್ತದೆ.
ಹೀಗಾಗಿ ನಿಯಮಿತ ಪ್ರಮಾಣದಲ್ಲಿ ಪ್ರತಿ ದಿನ ಲವಂಗ ಸೇವನೆ ಮಾಡುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡಿಕೊಂಡು, ಮಧುಮೇಹವನ್ನು ನಿರ್ವಹಣೆ ಮಾಡಿಕೊಳ್ಳಬಹುದು.
ಇದಕ್ಕಾಗಿ ನೀವು 10ಗ್ರಾಂ ಲವಂಗದ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಖಾಲಿ ಹೊಟ್ಟೆಯಲ್ಲಿ ಬೆಳಗಿನ ಸಮಯದಲ್ಲಿ ಸೇವನೆ ಮಾಡಬೇಕು. ಇದರಲ್ಲಿ ಮಧುಮೇಹ ವಿರೋಧಿ ಗುಣಲಕ್ಷಣಗಳು ಇರುವುದರಿಂದ ಸಾಕಷ್ಟು ಅನುಕೂಲವಾಗಲಿದೆ.

ಲವಂಗ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದು ಮಾತ್ರವಲ್ಲದೆ ಕರುಳಿನ ಭಾಗದಲ್ಲಿ ಕಂಡುಬರುವ ಅತಿಯಾದ ಗ್ಯಾಸ್ ಅಥವಾ ಆಮ್ಲೀಯತೆಯನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಲವಂಗದಲ್ಲಿ ಅತ್ಯದ್ಭುತ ಎಸೆನ್ಶಿಯಲ್ ಆಯಿಲ್ ಕೂಡ ಇರುವುದರಿಂದ ಉರಿಯೂತ ನಿಯಂತ್ರಣವಾಗುತ್ತದೆ ಮತ್ತು ಹೊಟ್ಟೆಯ ಭಾಗದಲ್ಲಿ ಕಂಡುಬರುವಂತಹ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
ನೀವು ಲವಂಗವನ್ನು ಬಾಯಿಯಲ್ಲಿ ಜಗಿದು ಅದರ ರಸವನ್ನು ಕುಡಿಯಬೇಕು. ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಈ ರೀತಿ ಮಾಡುವುದರಿಂದ ಬಾಯಿಯಲ್ಲಿ ಇರುವಂತಹ ಎಂಜಲು ಹೆಚ್ಚಾಗುತ್ತದೆ ಮತ್ತು ದೇಹದ ಜೀರ್ಣ ಶಕ್ತಿ ಅಭಿವೃದ್ಧಿಯಾಗುತ್ತದೆ.

ಆಮ್ಲೀಯತೆ ಹೆಚ್ಚಾಗಿರುವ ಜನರು ತಮ್ಮ ಹೊಟ್ಟೆಯ ಭಾಗದ ಹಾಗೂ ಗಂಟಲಿನ ಭಾಗದ ಅಸ್ವಸ್ಥತೆಯನ್ನು ದೂರ ಮಾಡಿಕೊಳ್ಳಲು ಹಾಗೂ ಎದೆಯ ಭಾಗದಲ್ಲಿ ಕಟ್ಟಿದ ಸಿಂಬಳವನ್ನು ಕರಗಿಸಿಕೊಳ್ಳಲು ಇದು ಅನುಕೂಲವಾಗುತ್ತದೆ.
ಇದಕ್ಕಾಗಿ ನೀವು ಊಟ ಆದ ಮೇಲೆ ಒಂದು ಲವಂಗವನ್ನು ಬಾಯಿಗೆ ಹಾಕಿಕೊಂಡು ಯಾವುದೇ ಬಗೆಯ ಸಿಹಿ ಪದಾರ್ಥಗಳನ್ನು ತಿನ್ನಲು ಹೋಗಬಾರದು. ಲವಂಗದ ರಸ ಕುಡಿಯುವುದರಿಂದ ದೇಹದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ.