ಶಿಮ್ಲಾದಲ್ಲಿ ಹೆಚ್ಚು ಭೇಟಿ ನೀಡಲ್ಪಡುವ ಧಾರ್ಮಿಕ ಸ್ಥಳ ತಾರಾ ದೇವಿ ದೇವಾಲಯ

23/12/2021

ತಾರಾ ದೇವಿ ದೇವಸ್ಥಾನವು ಶಿಮ್ಲಾದಲ್ಲಿ ಹೆಚ್ಚು ಭೇಟಿ ನೀಡಲ್ಪಡುವ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು ಸಮುದ್ರ ಮಟ್ಟದಿಂದ 7200 ಅಡಿ ಎತ್ತರದಲ್ಲಿ ಸ್ಥಾಪಿಸಲಾಗಿದೆ. ಇದು ಶಿಮ್ಲಾ ನಗರದಿಂದ 11 ಕಿ.ಮೀ ದೂರದಲ್ಲಿದೆ. ಹತ್ತಿರದಲ್ಲಿ ಶಿವ ದೇವಾಲಯವಾದ ಶಿವ ಬಾವ್ಡಿ ಇದೆ.

ಕ್ರಿ.ಶ 1766 ರ ಸುಮಾರಿಗೆ ತಾರಾ ದೇವಿ ದೇವಾಲಯವನ್ನು ಸೇನ್ ರಾಜವಂಶದ ರಾಜರು ನಿರ್ಮಿಸಿದರು.  ಗಿರಿ ಸೇನ್‍ನ ಕೋಟೆಯು ಜುಂಗಾದಲ್ಲಿ ಇನ್ನೂ ಇದೆ.

250 ವರ್ಷಗಳ ಹಿಂದಿನ ಕಥೆಯೊಂದರ ಪ್ರಕಾರ, ತನಗೆ ಒಂದು ಕನಸು ಬಂದು ಅದರಲ್ಲಿ ತಾರಾ ದೇವಿಯು ಅವನಿಗೆ ಜನರು ತನ್ನ ಆಶೀರ್ವಾದವನ್ನು ಪಡೆಯುವಂತಾಗಲು ಅಲ್ಲಿ ಒಂದು ಮಾದರಿಯನ್ನು ಸ್ಥಾಪಿಸಲು ಕೇಳಿಕೊಂಡಾಗ ರಾಜ ಭೂಪೇಂದ್ರ ಸೇನ್ ಈ ದೇವಾಲಯವನ್ನು ನಿರ್ಮಿಸಿದನು. ಅವನು ಅಲ್ಲಿ ದೇವಿಯ ಒಂದು ಮರದ ವಿಗ್ರಹವನ್ನೂ ಸ್ಥಾಪಿಸಿದನು.

ಹಿಂದೂ ಧರ್ಮ ಮತ್ತು ಬೌದ್ಧಧರ್ಮದಲ್ಲಿ ತಾರಾ ದೇವತೆಯು ಮಹಾವಿದ್ಯೆಯರು ಎಂದು ಕರೆಯಲ್ಪಡುವ ಹತ್ತು ಮಹಾನ್ ವಿವೇಕಗಳಲ್ಲಿ ಎರಡನೆಯವಳು ಮತ್ತು ಎಲ್ಲ ಶಕ್ತಿಗಳ ಮೂಲವೆಂದು ಪರಿಚಿತವಾಗಿದ್ದಾಳೆ.