ಗಣರಾಜ್ಯೋತ್ಸವದ ದೆಹಲಿ ಪಥಸಂಚಲನಕ್ಕೆ ಕುಶಾಲನಗರದ ರಿಷಿಕಾ ಆಯ್ಕೆ

09/01/2022

ಮಡಿಕೇರಿ ಜ.9 : ದೇಶದ 73 ನೇ ಗಣರಾಜ್ಯೋತ್ಸವದ ದೆಹಲಿ ಪಥಸಂಚಲನಕ್ಕೆ ಕುಶಾಲನಗರದ ರಿಷಿಕಾ ಬೆಳ್ಳಿಯಪ್ಪ ಆಯ್ಕೆಯಾಗಿದ್ದಾರೆ. ಕರ್ನಾಟಕ ಹಾಗೂ ಗೋವಾ ರಾಜ್ಯದಿಂದ ಪ್ರತಿನಿಧಿಸಿದ್ದ ಒಟ್ಟು 57 ವಿದ್ಯಾರ್ಥಿನಿಯರಲ್ಲಿ 6 ಮಂದಿ ಆಯ್ಕೆಯಾಗಿದ್ದು, ಇವರಲ್ಲಿ ರಿಷಿಕಾ ಕೂಡ ಒಬ್ಬರಾಗಿದ್ದಾರೆ. ಮೈಸೂರು, ಕೊಡಗು ಹಾಗೂ ಮಂಗಳೂರು ವಿಭಾಗದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿಯಾಗಿದ್ದಾರೆ.
ಕುಶಾಲನಗರದ ಮಾದಾಪಟ್ಟಣದ ನಿವಾಸಿಗಳಾದ ತಡಿಯಪ್ಪನ ಬೆಳ್ಳಿಯಪ್ಪ ಹಾಗೂ ಅಂಚೆ ಇಲಾಖೆಯ ನಳಿನಿ ದಂಪತಿಗಳ ಪುತ್ರಿ ರಿಷಿಕಾ ಪ್ರಸ್ತುತ ಮಂಗಳೂರಿನ ಸೇಂಟ್ ಎಲೋಶಿಯಸ್ ಕಾಲೇಜ್ ನಲ್ಲಿ ಮೊದಲ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ.