ಕೇರಳ ಶೈಲಿಯ ಚಿಕನ್ ರೋಸ್ಟ್ ಮಾಡುವ ವಿಧಾನ

11/01/2022

ಬೇಕಾಗುವ  ಸಾಮಗ್ರಿ :  750 ಗ್ರಾಂ ಕೋಳಿ ಮಾಂಸ,  4 – ಕತ್ತರಿಸಿದ ಈರುಳ್ಳಿ, 1 ಚಮಚ  ಚಿಲ್ಲಿ,  ಅಗತ್ಯಕ್ಕೆ ತಕ್ಕಷ್ಟು ಕರಿಬೇವು, ಅಗತ್ಯಕ್ಕೆ ತಕ್ಕಷ್ಟು ವಿನೆೆಗರ್, 1 ಕತ್ತರಿಸಿದ ಶುಂಠಿ, ಅಗತ್ಯಕ್ಕೆ ತಕ್ಕಷ್ಟು ಕತ್ತರಿಸಿದ ಬೆಳ್ಳುಳ್ಳಿ, ಅಗತ್ಯಕ್ಕೆ ತಕ್ಕಷ್ಟು ಸಂಸ್ಕರಿಸಿದ ಎಣ್ಣೆ.

ಮಾಡುವ ವಿಧಾನ  : ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ, ಬಿಸಿಮಾಡಿ. ಎಣ್ಣೆ ಬಿಸಿಯಾದ ಬಳಿಕ ಕರಿಬೇವಿನ ಎಲೆ, ಹೆಚ್ಚಿಕೊಂಡ ಈರುಳ್ಳಿ ಸೇರಿಸಿ, 2 ನಿಮಿಷ ಹುರಿಯಿರಿ. ಬಳಿಕ ವಿನೆಗರ್, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ 2-3 ನಿಮಿಷಗಳ ಕಾಲ ಹುರಿಯಿರಿ. ಚಿಕನ್, ಕೆಂಪು ಮೆಣಸಿನ ಫ್ಲೇಕ್ಸ್ ಮತ್ತು ಸ್ವಲ್ಪ ನೀರನ್ನು ಸೇರಿಸಿ 8-10 ನಿಮಿಷಗಳ ಕಾಲ ಬೇಯಿಸಿ.-

ನಂತರ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿ.  ನಂತರ ಚಿಕನ್ ಅನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಚಿಕನ್ ಉತ್ತಮವಾಗಿ ಬೆಂದು ಮೃದುವಾದ ಸ್ಥಿರತೆಯನ್ನು ಪಡೆದುಕೊಳ್ಳಲು ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸಿ. ರುಚಿಕರವಾದ ಈ ಖಾದ್ಯವನ್ನು ನಿಮ್ಮ ಆಯ್ಕೆಗೆ ಅನುಗುಣವಾಗಿ ರೊಟ್ಟಿಯೊಂದಿಗೆ, ಬ್ರೆಡ್‍ನೊಂದಿಗೆ ಅಥವಾ ಹಾಗೆಯೇ ಬಿಸಿ ಬಿಸಿಯಾಗಿ ಸವಿಯಬಹುದು.