ಚೋರರನ್ನು ಬೆನ್ನಟ್ಟಿ ಸೆರೆ ಹಿಡಿದ ಪೊಲೀಸ್ ಅಧಿಕಾರಿಗೆ ಪ್ರಶಂಸೆಯ ಸುರಿಮಳೆ

13/01/2022

ಮಡಿಕೇರಿ ಜ.13 : ಮಂಗಳೂರಿನಲ್ಲಿ ಮೊಬೈಲ್ ಹಾಗೂ ಇತರ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಲು  ಯತ್ನಿಸಿದ ಅರೋಪಿಗಳನ್ನು ಸುಮಾರು ಒಂದೂವರೆ ಕಿ.ಮೀ ದೂರ ಬೆನ್ನಟ್ಟಿ ಹಿಡಿದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಕಮೀಷನರ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ARSI ವರುಣ ಆಳ್ವ ಅವರ ಕರ್ತವ್ಯ ಪ್ರಜ್ಞೆಯ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.  ಆರೋಪಿಗಳನ್ನು ಪತ್ತೆ ಹಚ್ಚಿ ಅವರಲ್ಲಿದ್ದ ಸೊತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದ ವರುಣ ಆಳ್ವ ಅವರನ್ನು ಪೊಲೀಸ್ ಕಮೀಷನರ್ ಶಶಿಕುಮಾರ್ ತಮ್ಮ ಕಚೇರಿಯಲ್ಲಿ ಅಭಿನಂದಿಸಿ ಪ್ರಶಂಸನಾ ಪತ್ರ ನೀಡಿದರು. ವರುಣ ಆಳ್ವ ಅವರು ಚೋರರನ್ನು ಬೆನ್ನಟ್ಟಿದ ದೃಶ್ಯಾವಳಿಗಳು ಇದೀಗ ವೈರಲ್ ಆಗಿದೆ.