ಕೂಡಿಗೆ ಡಯಟ್ ಸಂಸ್ಥೆಯ ನೂತನ ಉಪ ನಿರ್ದೇಶಕರಾಗಿ ರಂಗನಾಥಸ್ವಾಮಿ ಅಧಿಕಾರ ಸ್ವೀಕಾರ

14/01/2022

ಮಡಿಕೇರಿ ಜ.14 : ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯ ನೂತನ ಉಪ ನಿದೇರ್ಶಕರು ಹಾಗೂ ಪ್ರಾಂಶುಪಾಲರಾಗಿ ಕಡೂರಿನ ಜಿ.ರಂಗನಾಥಸ್ವಾಮಿ  ಅಧಿಕಾರ ಸ್ವೀಕರಿಸಿದರು.
ಡಯಟ್ ಸಂಸ್ಥೆಯ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ  ಕೆ.ವಿ.ಸುರೇಶ್ ರವರು ಸಂಸ್ಥೆಯ
ನೂತನ ಪ್ರಾಂಶುಪಾಲರಾದ ಜಿ. ರಂಗನಾಥಸ್ವಾಮಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಕೆ.ವಿ.ಸುರೇಶ್ ಅವರು ಕೊಡಗಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ನೂತನ ಉಪ ನಿರ್ದೇಶಕರಿಗೆ ಮಾಹಿತಿ ನೀಡಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಜಿ.ರಂಗನಾಥಸ್ವಾಮಿ,  ಕೋವಿಡ್ ಪರಿಸ್ಥಿತಿಯಲ್ಲಿ ಕೊಡಗು ಜಿಲ್ಲೆಯ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿರುವುದು ತುಂಬಾ ಸಂತಸ ತಂದಿದೆ ಎಂದರು.
ಕೋವಿಡ್ ಪರಿಸ್ಥಿತಿಯಲ್ಲಿ ಕೊಡಗು ಜಿಲ್ಲೆಯ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿದ್ದು, ತಾವು ಡಯಟ್ ನ ಧ್ಯೇಯ ಮತ್ತು ಪ್ರಮುಖ ಚಟುವಟಿಕೆಗಳಿಗೆ ಆದ್ಯತೆ ನೀಡುವ ಮೂಲಕ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮ ಪಡಿಸಲು ಹೆಚ್ಚಿನ ಗಮನಹರಿಸಲಾಗುವುದು ಎಂದರು.

ಜಿ.ರಂಗನಾಥಸ್ವಾಮಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದು, ಮುಂಬಡ್ತಿ ಹೊಂದಿ ಕೂಡಿಗೆ ಡಯಟ್ ಗೆ ಉಪ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.