ಮಡಿಕೇರಿ : ನಗರಸಭೆಗೆ ಜೆಸಿಬಿ ಹಸ್ತಾಂತರ

14/01/2022

ಮಡಿಕೇರಿ ಜ.14 :  15ನೇ ಹಣಕಾಸು ಯೋಜನೆಯಲ್ಲಿ  ನಗರಸಭೆಗೆ ನೂತನ ಜೆಸಿಬಿಯನ್ನು ಹಸ್ತಾಂತರಿಸಲಾಯಿತು.

ಶಾಸಕ ಅಪ್ಪಚ್ಚು ರಂಜನ್ ವಾಹನಕ್ಕೆ ಪೂಜೆ ಸಲ್ಲಿಸಿ,  ಚಾಲನೆ ನೀಡಿದರು.  ನಂತರ ಮಾತನಾಡಿದ ಅವರು, ನಗರದ ಸ್ವಚ್ಛತೆಯನ್ನು ತ್ವರಿತಗತಿಯಲ್ಲಿ ನಿರ್ವಹಿಸುವ ಸಲುವಾಗಿ ರೂ.33 ಲಕ್ಷದ ಜೆಸಿಬಿಯನ್ನು ನಗರಸಭೆಗೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ 2 ಟ್ಯಾಕ್ಟರ್ ಹಾಗೂ 1 ಪಿಕಪ್ ನೀಡಲಾಗುವುದೆಂದರು.

ಈ ಸಂದರ್ಭ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಸದಸ್ಯರು ಹಾಜರಿದ್ದರು.